ತಂದೆಯ ಕುಡಿತದ ಚಟಕ್ಕೆ ಬೇಸತ್ತ ಮಗ ಮಾಡಿದ್ದೇನು…ನೀವೆ ನೋಡಿ!

Tumkur: Student Protest for demanding ban on alcohol.

ತಂದೆ ಕುಡಿದು ಬಂದ ತಾಯಿಗೆ ಹೊಡೆಯೋದನ್ನು ನೋಡಿ-ನೋಡಿ ಆ ಹುಡುಗ ಬೇಸತ್ತು ಹೋಗಿದ್ದ.

 

ಕೇವಲ ಇದು ಆತನ ಸಮಸ್ಯೆ ಆಗಿರದೇ ಆ ಬಾಲಕನ ಸ್ನೇಹಿತರ ಸಮಸ್ಯೆಯೂ ಆಗಿತ್ತು. ಹೀಗಾಗಿ ಬೇಸತ್ತ ಬಾಲಕರೆಲ್ಲರೂ ಸೇರಿ ಸಾರಾಯಿ ಮಾರೋರ ವಿರುದ್ಧ ವೇ ಮುಗಿ ಬಿದ್ದಿದ್ದು, ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.  ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಅಲ್ಬೂರು ಪ್ರೌಡಶಾಲೆಯ ವಿದ್ಯಾರ್ಥಿ ಎ.ಬಿ.ಲೋಕೇಶ್​​ ತನ್ನ ಸ್ನೇಹಿತರ ಜೊತೆ ಮದ್ಯಪಾನ ನಿಷೇದಿಸಿ ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾನೆ.

 

ಪ್ರತಿದಿನ ತಂದೆ ಎಣ್ಣೆ ಹೊಡೆದು ತಾಯಿಗೆ ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮಗ ಇಂತಹದೊಂದು ಪ್ರಯತ್ನಕ್ಕೆ ಕೈಹಾಕಿದ್ದಾನೆ. ತಿಪಟೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಅತಿಯಾಗಿದ್ದು, ಇದರಿಂದ ಕುಟುಂಬಗಳ ನೆಮ್ಮದಿ ಹಾಳಾಗಿದೆ. ಹೀಗಾಗಿ ಬೇಸತ್ತ ಲೋಕೇಶ್​ ತಿಪಟೂರು ತಾಲೂಕು ಕಚೇರಿ ಮುಂಭಾಗದಲ್ಲಿ ಏಕಾಂಗಿಯಾಗಿ ಧರಣಿಗೆ ಕೂತಿದ್ದಾನೆ.
10 ನೇ ತರಗತಿ ವಿದ್ಯಾರ್ಥಿಯಾಗಿರುವ ಲೊಕೇಶ್​​ ಗೆ ಈಗ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಹೀಗಿದ್ದರೂ ಆತ ಪರೀಕ್ಷೆ ಬಿಟ್ಟು ಪ್ರತಿಭಟನೆಗೆ ಮುಂಧಾಗಿದ್ದಾನೆ. ಮದ್ಯವ್ಯಸನಿಗಳ ಕಾಟದಿಂದ ಬೇಸತ್ತ ಲೊಕೇಶ್​ ಈ ಹೋರಾಟಕ್ಕೆ ಮುಂಧಾಗಿದ್ದಾನೆ. ಇದೀಗ ತಹಶೀಲ್ದಾರ್ ಮಂಜುನಾಥ್​ ವಿದ್ಯಾರ್ಥಿ ಮನವೊಲಿಸಲು ಯತ್ನಿಸಿದ್ದರೂ ಫಲಕಾರಿಯಾಗಿಲ್ಲ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here