ತುಮಕೂರು ಹೈವೆಲೀ ಎಗ್ಗಿಲ್ಲದೇ ನಡೀತಿದೆ ವೀಲ್ಹಿಂಗ್​​- ಕಣ್ಮುಚ್ಚಿ ಕುಳಿತಿದೆ ಖಾಕಿ ಪಡೆ!!

ಹೈವೈಗಳಲ್ಲಿ ಗಾಡಿ ಓಡಿಸುತ್ತಿದ್ದರೇ ಎಷ್ಟೋತ್ತಿಗೆ ಎಲ್ಲಿ ಅಪಘಾತವಾಗುತ್ತೋ ಅನ್ನೋ ಭಯ ನಮ್ಮನ್ನು ಯಾವಾಗಲು ಕಾಡುತ್ತಿರುತ್ತೆ. ಹೀಗಿರುವಾಗ ನಿಮ್ಮ ಪಕ್ಕದಲ್ಲಿ ಯಾರೋ ಎರ್ರಾಬಿರ್ರಿ ಬೈಕ್​ ಓಡಿಸಿದ್ರೆ ನಿಮ್ಮ ಸ್ಥಿತಿ ಹೇಗಿರುತ್ತೆ ಹೇಳಿ.

ಅಂತಹುದೇ ಸ್ಥಿತಿ ತುಮಕೂರು ಹೈವೈ ಪ್ರಯಾಣಿಕರಿಗೆ ಎದುರಾಗಿದೆ. ಹೌದು ತುಮಕೂರು ಹೈವೇನಲ್ಲಿ ವೀಲ್ಹಿಂಗ್​ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಗಾಡಿ ಚಲಾಯಿಸುವಂತೆ ಸ್ಥಿತಿ ಎದುರಾಗಿದೆ. ಹೌದು ತುಮಕೂರಿನಲ್ಲಿ ವ್ಹೀಲಿಂಗ್​​ ಮಾಡುವವರ ಹಾವಳಿ ಹೆಚ್ಚಾಗಿದ್ದು, ಈ ಹಿಂದೆಯೇ ವ್ಹೀಲಿಂಗ್​​ ಹಾವಳಿಯಿಂದ ಹದಿನೈದಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ. ಹೀಗಿದ್ದರೂ ಟೋಲ್ ನಿಂದ ಹಿಡಿದು ಸುಮಾರು 16 ಕಿಲೋಮೀಟರ್​​ ವರೆಗೆ ಕಿಡಿಕೇಡಿಗಳು ವೀಲ್ಹಿಂಗ್ ಮಾಡ್ತಿದ್ದಾರೆ. ಇದ್ರಿಂದ ಫುಲ್ ಟ್ರಾಫಿಕ್ ಜಾಮ್​ ಆಗ್ತಿರೋದರ ಜೊತೆಗೆ ಪಕ್ಕದಲ್ಲಿ ಪ್ರಯಾಣಿಸುವ ವಾಹನ ಸವಾರರಿಗೂ ಡಿಸ್ಟರ್ಬ್​ ಆಗ್ತಿದೆ.

ಇನ್ನು ತುಮಕೂರು ಮುಖ್ಯರಸ್ತೆಯಲ್ಲಿ ಕಿಡಿಕೇಡಿಗಳು ಮಾಡ್ತಿರೋ ಇಂತಹ ಕೃತ್ಯದ ವಿಡಿಯೋ ಬಿಟಿವಿನ್ಯೂಸ್​​ಗೆ ಲಭ್ಯವಾಗಿದೆ. ನಂಬರ್ ಪ್ಲೇಟ್​ ಇಲ್ಲದ ಬೈಕ್​​ಗಳನ್ನು ಬಳಸಿಕೊಂಡು ಈ ಹುಡುಗರು ವೀಲ್ಹಿಂಗ್​ ಮಾಡೋದರಿಂದ ಪೊಲೀಸರಿಗೆ ಇವರನ್ನು ಬಂಧಿಸಲು ಕಷ್ಟವಾಗುತ್ತಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಟ್​​ ಪೊಲೀಸರು ಕೂಡ ರೌಂಡ್ಸ್​​ ಸರಿಯಾಗಿ ಮಾಡದೇ ಇರೋದರಿಂದ ಇಂತಹ ಯುವಕರಿಗೆ ಸ್ವಾತಂತ್ರ ಸಿಕ್ಕಂತಾಗಿದ್ದು, ಎರ್ರಾಬಿರ್ರಿ ವೀಲ್ಹಿಂಗ್ ಮಾಡಿ ಇತರ ವಾಹನ ಚಾ;ಲಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಭಾರಿ ಅಪಘಾತಕ್ಕೂ ಮುನ್ನ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ.