ಸಿದ್ದರಾಮಯ್ಯ ಮತ್ತು ಯೋಗಿ ಆದಿತ್ಯನಾಥ್ ಮದ್ಯೆ ವಾರ್ !! ಕರ್ನಾಟಕ ಮೇಲೋ ? ಯುಪಿ ಮೇಲೋ ? ಟ್ವಿಟರ್ ನಲ್ಲಿ ವಾದ ವಿವಾದ !!

Twitter War: CM Siddaramaiah Twitter Against UP CM Yogi Adityanath.
Twitter War: CM Siddaramaiah Twitter Against UP CM Yogi Adityanath.

ಟಿವಿ ಮಾದ್ಯಮಗಳ ಮೂಲಕ ಪರಸ್ಪರ ಹರಿಹಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇದೀಗ ಇಬ್ಬರೂ ನೇರ ಪ್ರಶ್ನೆಗಳ ವಾರ್ ಗೆ ಮುಂದಾಗಿದ್ದಾರೆ.

ರವಿವಾರ ಬೆಂಗಳೂರಿನ ಪರಿವರ್ತನಾ ರ್ಯಾಲಿಗೆ ಬಂದಿದ್ದ ಯೋಗಿ ಆದಿತ್ಯನಾಥ್, ಕರ್ನಾಟಕ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಯೋಗಿ ಬಾಷಣ ಮುಗಿದ ತಕ್ಷಣ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಯುಪಿ ಸಿಎಂ ಯೋಗಿ ಆದಿತ್ಯನಾಥ್ ರಿಗೆ ಬೆಂಗಳೂರಿಗೆ ಸ್ವಾಗತ. ನಮ್ಮ ಇಂದಿರಾ ಕ್ಯಾಂಟೀನ್, ಪಡಿತರ ಅಂಗಡಿಗಳಿಗೂ ಒಮ್ಮೆ ಬೇಟಿ ಕೊಡಿ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸಾವುಗಳಿಗೆ ನೀವು ಉತ್ತರ ಕಂಡುಕೊಳ್ಳಬಹುದು ಎಂಬರ್ಥದಲ್ಲಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಟ್ವೀಟ್ ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ರಿಗೆ ಟ್ಯಾಗ್ ಮಾಡಲಾಗಿದ್ದು, ಅ್ಯಶ್ ಟ್ಯಾಗ್ ಕೂಡಾ ಬಳಸಲಾಗಿತ್ತು.

 

 

 

ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡುತ್ತಿದ್ದಂತೆ ರಿಟ್ವಿಟ್ ಮಾಡಿದ ಯೋಗಿ ಆದಿತ್ಯನಾಥ್, ” ನಿಮ್ಮ ಸ್ವಾಗತಕ್ಕೆ ಅಭಾರಿಯಾಗಿದ್ದೇನೆ. ಹಾಗೆಯೇ ಕರ್ನಾಟಕದಲಿ ನಡೆದಿರುವ ರೈತ ಆತ್ಮಹತ್ಯೆ, ದಕ್ಷ ಪ್ರಾಮಾಣಿಕ ಅಧಿಕಾರಿಗಳ ಸಾವಿನ ಬಗ್ಗೆಯೂ ನಾನು ಕೇಳಿದ್ದೇನೆ. ಯುಪಿಯಲ್ಲಿ ಕಾಂಗ್ರೆಸ್ ಸಹವರ್ತಿಗಳು ನಡೆಸಿದ ಅಕ್ರಮ ಚಟುವಟಿಕೆಗಳನ್ನು ತಡೆಯಲೆಂದೇ ನಾನು ಸಿಎಂ ಆಗಿದ್ದೇನೆ ” ಎಂದು ಖಾರವಾಗಿ ಉತ್ತರಿಸಿದ್ದಾರೆ. ಎರಡು ದೊಡ್ಡ ರಾಜ್ಯಗಳ ಮುಖ್ಯಮಂತ್ರಿಗಳ ಹೀಗೆ ನೇರವಾಗಿ ಕಚ್ಚಾಡಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here