ಸಿಡಿಮದ್ದು ಸಂಗ್ರಹಿಸಿದ್ದ ಜಾಗಕ್ಕೆ ಸಿಡಿಲು ಬಡಿದು ಸ್ಪೋಟ ಸಂಭವಿಸಿದ ಕಾರಣ ಇಬ್ಬರು ಸಾವು ಕಂಡು ಆರು ಜನರಿಗೆ ಗಾಯವಾಗಿರುವ ಘಟನೆ ಬೆಂಗಳೂರು ಹೊರ ವಲಯದಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಸಮೀಪದ ಹುಲ್ಲೇನಹಳ್ಳಿ ಬಳಿಯ ಜಲ್ಲಿ ಕ್ರಷರ್​​ನಲ್ಲಿ ಸಿಡಿಮದ್ದು ಸಂಗ್ರಹಿಸಲಾಗಿತ್ತು. ಮೃತರನ್ನು ಕೊಳ್ಳೇಗಾಲ ಮೂಲದ 39 ವರ್ಷದ ಆಂಥೋನಿ, ಮಧ್ಯಪ್ರದೇಶ ಮೂಲದ ಥೀರತ್ ಎಂದು ಗುರುತಿಸಲಾಗಿದೆ.
ಮೃತದೇಹಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಎಸ್ ಬಿ ಎಸ್ ಕ್ರಷರ್ ನಲ್ಲಿ ಘಟನೆ ನಡೆದಿದ್ದು,
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.