ಊಬರ್ ಚಾಲಕನಿಗೆ ಹಲ್ಲೆ : ಶೇಷಾದ್ರಿಪುರ ಪೊಲೀಸರಿಂದ ಪ್ರಕರಣ ದಾಖಲು

ಊಬರ್ ಚಾಲಕನಿಗೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದು, ನೂರಾರು ಊಬರ್ ಚಾಲಕರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬಂದು ಎಫ್ ಐ ಆರ್ ದಾಖಲಿಸುವಂತೆ ಒತ್ತಡ ಹಾಕಿದ್ರು. ಜಗದೀಶ್ ಎಂಬಾತ ಚಲಾಯಿಸುತ್ತಿದ್ದ ಉಬರ್ ಕಾರ್ ನಲ್ಲಿ ಗ್ರಾಹಕನೊಬ್ಬ ಐಟಿಸಿ ಹೊಟೇಲ್ ಬಳಿ ಡ್ರಾಪ್ ಕೇಳಿದ. ಐಟಿಸಿ ಹೋಟೇಲ್ ಬಳಿ ಡ್ರಾಪ್ ಮಾಡಿದಾಗ ಗ್ರಾಹಕ ತಕರಾರು ತೆಗೆದಿದ್ದಾರೆ. ಇದು ನನ್ನ ಡ್ರಾಪ್ ಪಾಯಿಂಟ್ ಅಲ್ಲ. ಬೇರೊಂದು ಕಡೆಗೆ ಡ್ರಾಪ್ ಕೊಡುವಂತೆ ಸೂಚಿಸಿದ್ದಾನೆ. ಗ್ರಾಹಕನ ಸೂಚನೆಯಂತೆ ಆತ ಸೂಚಿಸಿದ ಸ್ಥಳಕ್ಕೆ ಊಬರ್ ಚಾಲಕ ಬಿಟ್ಟಿದ್ದಾನೆ.

 

ಗ್ರಾಹಕ ಹಿಂದಿ ಭಾಷಿಕನಾಗಿದ್ದು, ಊಬರ್ ಚಾಲಕ ಜಗದೀಶ್ ಗೆ ಹಿಂದಿ ಬರುತ್ತಿರಲಿಲ್ಲ. ಇದರಿಂದಾಗಿ ಕೆರಳಿದ ಗ್ರಾಹಕ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸಿ ಬೈದಿದ್ದಾನೆ. ಗ್ರಾಹಕ ಸೂಚಿಸಿದ ಸ್ಥಳಕ್ಕೆ ತೆರಳಿದ ಬಳಿಕ ಅಲ್ಲಿ ಗ್ರಾಹಕ ಆತನ ಸಹವರ್ತಿಗಳನ್ನು ಕರೆದು ಹಲ್ಲೆ ನಡೆಸಿದ್ದಾನೆ ಎಂದು ಊಬರ್ ಚಾಲಕ ಜಗದೀಶ್ ಆರೋಪಿಸಿದ್ದಾನೆ. ಶೇಷಾದ್ರಿಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Avail Great Discounts on Amazon Today click here