ಹಾಲಿ‌ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಓಡಾಡುವ ರಸ್ತೆಯ, ಕೆಸರಿನಲ್ಲಿ ಉರುಳು ಸೇವೆ..! ಯಾಕೇ ಅಂತೀರಾ ಈ ಸುದ್ದಿ ಓದಿ.

ನಾಡಿದ ದೊರೆ ಸಿಎಂ ಕುಮಾರಸ್ವಾಮಿ ಅವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಸ್ಥಳೀಯರು ರಸ್ತೆಯಲ್ಲಿ ನಿಂತ‌ ಕೆಸರಿನಲ್ಲಿ ಉರುಳಾಡಿ ಆಕ್ರೋಶ ವ್ಯಕ್ತಪಡೆಸಿದ್ದಾರೆ.ಹುಬ್ಬಳ್ಳಿಯ ಬೈರಿದೇವರಕೊಪ್ಪದ ಸಿಎಂ ಕುಮಾರಸ್ವಾಮಿಯವರ ಮನೆಗೆ ಹೋಗುವ ರಸ್ತೆ ಹಾಳಾಗಿದ್ದು, ವಾಹನ ಸವಾರರು ಈ ರಸ್ತೆಯಲ್ಲಿ ಸಂಚಾರ ಮಾಡಲು ಭಯ ಪಡ್ತಾಯಿದ್ದಾರೆ. ಪ್ರತಿನಿತ್ಯ ಮಹಿಳೆಯರು, ಮಕ್ಕಳು, ವೃದ್ಧರು, ಬೈಕ್ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ.

ad

ಹಾಗಾಗಿ ರೊಚ್ಚಿಗೆದ್ದು, ರಸ್ತೆಯಲ್ಲಿನ ಕೆಸರು ಮೈ ಮೇಲಿ ಹಾಕಿಕೊಂಡು ರಸ್ತೆಯನ್ನು ದುರಸ್ತೆ ಮಾಡುವಂತೆ ಸಿಎಂ ಕುಮಾರಸ್ವಾಮಿ ಹಾಗೂ ಈ ಕ್ಷೇತ್ರವನ್ನು ಸ್ಪಂದಿಸೋ , ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವಾರದಲ್ಲಿ ರಸ್ತೆಯನ್ನು ದುರಸ್ತೆ ಮಾಡಿದಿದ್ರೆ, ಹುಬ್ಬಳ್ಳಿ- ಧಾರವಾಡ ಮಾರ್ಗವನ್ನು ಬಂದ್ ಮಾಡಿ‌ ಹೋರಾಟ ಮಾಡಲಾಗುವದು ಅಂತಾ ಹೇಳಿದ್ದಾರೆ…