ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ !! ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಚಮಚಾಗಳು ಎಂದ ಮಾಜಿ ಸಚಿವ !!

ಇವತ್ತು ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ ನಡೆಯಿತು. ಬೆಳಿಗ್ಗೆ 11.30 ಕ್ಕೆ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ನಾಯಕತ್ವ ಬಗೆಗಿನ ಅಪಸ್ವರ ಕೇಳಬೇಕಾಯ್ತು.

ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಪತ್ರಿಕಾಗೋಷ್ಠಿ ಮುಗಿಸುತ್ತಿದ್ದಂತೆ ಪರಮೇಶ್ವರ್ ಬಳಿ ಬಂದ ಮಾಜಿ ಸಚಿವ ವೈಜನಾಥ್ ಪಾಟೀಲ್, ತನಗೆ ಮತ್ತು ತನ್ನ ಮಗನಿಗೆ ಕಾಂಗ್ರೆಸ್ ನಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಅವಲತ್ತುಕೊಂಡರು. ತಮ್ಮ ಪುತ್ರ ವಿಕ್ರಮ ಪಾಟೀಲ್ ಗೆ ಎಂ ಎಲ್ ಸಿ ಸ್ಥಾನ ಕೊಡಲು ಬೇಡಿಕೆ ಇಟ್ಟರು.‌ ಆದರೆ ಪರಮೇಶ್ವರ್ ಸರಿಯಾಗಿ ಸ್ಪಂದನೆ ನೀಡಿಲ್ಲ. ಮತ್ತೆ ಮಾತು ಮುಂದುವರೆಸಿದ ವೈಜನಾಥ್ ಪಾಟೀಲ್, “ಧರಂ ಸಿಂಗ್ ಪುತ್ರರು, ಮಲ್ಲಿಕಾರ್ಜನ ಖರ್ಗೆ ಪುತ್ರರಿಗೆ ಅವಕಾಶ ಸಿಗುತ್ತದೆ‌. ನನ್ನ ಕುಟುಂಬಕ್ಕೆ ಯಾಕೆ ಅವಕಾಶ ಸಿಗುತ್ತಿಲ್ಲ” ಎಂದು ಪ್ರಶ್ನಿಸಿದರು.

ವೈಜನಾಥ್ ಪಾಟೀಲ್ ಪಟ್ಟು ಬಿಡದೇ ಇದ್ದಾಗ ಸ್ಥಳದಿಂದ ಪರಮೇಶ್ವರ್ ತೆರಳಿದರು. ಪರಮೇಶ್ವರ್ ಹೋಗುತ್ತಿದ್ದಂತೆ ಜೋರಾದ ದ್ವನಿಯಲ್ಲಿ ಮಾತನಾಡಿದ ವೈಜನಾಥ್, ಏಯ್ ಅಧ್ಯಕ್ಷ, ಏಯ್ ಅಧ್ಯಕ್ಷ… ನಾನು ಮಾತಾಡ್ತಾ ಇದ್ದೀನಿ. ಹೊರಟುಬಿಟ್ಯಲ್ಲಾ ನೀನು ಎಂದರು. ನಂತರ ಮಾಧ್ಯಮದ ಜೊತೆ ಮಾತನಾಡಿದ ವೈಜನಾಥ್ ಪಾಟೀಲ್, “ಕಾಂಗ್ರೆಸ್ ನಾಯಕರು ಚಮಕ ಗಿರಿ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ರಾಜ್ಯ ಅಧ್ಯಕ್ಷ, ಸಿಎಂ ಸ್ಥಾನ ಕೊಡಲಿ. ಪರಮೇಶ್ವರ್ ಮತ್ರು ಸಿಎಂ ಉತ್ತರ ಕರ್ನಾಟಕದವರ ಮಾತಿಗೆ ಬೆಲೆಕೊಡಲ್ಲ. ಇಬ್ಬರು ಚಮಕ ಗಿರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.