ಕನ್ನಡ ಧ್ವಜಕ್ಕೆ ವಾಟಾಳ್ ವಿರೋಧ!!

ಕನ್ನಡ ನೂತನ ಬಾವುಟಕ್ಕೆ ಕೆಲ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ad


ನಗರದ ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿ ಕನ್ನಡ ಓಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರ ನೂತನ ಬಾವುಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ರು. ಸರ್ಕಾರ ಯಾವದೇ ಬಾವುಟ ಮಾಡಲೀ. ನಮ್ಮ ಅಧಿಕೃತ ಬಾವುಟ ಹಳದಿ ಕೆಂಪು. ನಾವು ಹೊಸ ಬಾವುಟ ವನ್ನು ತೆಗೆದುಕೊಳ್ಳುವುದಿಲ್ಲ. ನಮ್ಮ ಹೋರಾಟ ಹಾಗೂ ಚಳುವಳಿಗೆ ಹಳದಿ ಕೆಂಪು ಬಾವುಟವನ್ನೇ ಮುಂದುವರೆಸುತ್ತೇವೆ. ಹಳದಿ ಕೆಂಪು ಬಾವುಟಕ್ಕೆ ೬೦ ವರ್ಷದ ಇತಿಹಾಸವಿದೆ.ಜನ್ರ ಮನದಲಿ ಮನೆ ಮಾಡಿದೆ.

 

ಇತಂಹ ಬಾವುಟವನ್ನು ಯಾವುದೇ ಸರ್ಕಾರ ,ರಾಜಕಾರಣಿಗಳು, ಸಾಹಿತ್ಯ ಗಳು ಇದುವರೆಗೂ ಕೂಡ ಯಾರು ವಿರೋಧ ಮಾಡಿಲ್ಲ. ದೇಶ ವಿದೇಶದಲ್ಲಿ ಈ ಬಾವುಟ ರಾರಾಜಿಸಿದೆ. ಇತಂಹ ಪ್ರೀತಿ ಬಾವುಟದ ಬದಲಾವಣೆ ಅವಶ್ಯಕತೆ ಇರಲಿಲ್ಲ.. ಈ ಕೆಲ ಸಾಹಿತಿಗಳಿಗೆ ಬಾವುಟದ ಬಗ್ಗೆ ಸ್ವಲ್ಪ ಜ್ಞಾನ ಹಾಗೂ ಇತಿಹಾಸ ಗೋತ್ತಿಲ್ಲ ಅಂತಾ ಕಿಡಿಕಾರಿದ್ರು..ಮುಖ್ಯಮಂತ್ರಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸುತ್ತೇವೆ.ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು..