ಸ್ವತಂತ್ರ ಧರ್ಮ ವಿಚಾರಕ್ಕೆ ಸಿದ್ಧಗಂಗಾಶ್ರೀ ಹೆಸರು ಎಳೆತಂದ ವಿಚಾರ ಸಚಿವ ಎಂ.ಬಿ.ಪಾಟೀಲ್​ ಮೇಲೆ ಬಿ.ಎಸ್​.ಯಡಿಯೂರಪ್ಪ ವಾಗ್ದಾಳಿ ವಿನಾಶಕಾಲೇ ವಿಪರೀತ ಬುದ್ಧಿ ಎಂದು ಪಾಟೀಲ್​​ ಮೇಲೆ ಗರಂ ಆದ ಬಿಎಸ್​ವೈ ಶ್ರೀಗಳ ಹೆಸರು ತರದೇ ಮೌನವಾಗಿರೋದು ಪಾಟೀಲರಿಗೂ ಗೌರವ ತರುತ್ತೆ ಶ್ರೀಗಳ ಬಗ್ಗೆ ಮತ್ತೆ ಮಾತನಾಡುವ ಪ್ರಯತ್ನ ಮಾಡಿದ್ರೆ ಪಾಟೀಲ್​ಗೆ ಶೋಭೆ ತರಲ್ಲ ಅಖಿಲಭಾರತ ವೀರಶೈವ ಮಹಾಸಭಾ ತೀರ್ಮಾನಕ್ಕೆ ಬದ್ಧ ಎಂದು ಹಿಂದೆಯೇ ಹೇಳಿದ್ದೇವೆ ಕೆಲವರು ರಾಜಕೀಯವಾಗಿ ಗೊಂದಲ ಸೃಷ್ಟಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ

‘ವಿನಾಶಕಾಲೇ ವಿಪರೀತ ಬುದ್ಧಿ’
=====

ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ. ಸಚಿವ ಎಂ.ಬಿ.ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದಗಂಗಾಶ್ರೀಗಳ ಹೆಸರು ಎಳೆದು ತಂದ ವಿಚಾರ. ವಿನಾಶಕಾಲೆ ವಿಪರೀತ ಬುದ್ದಿ ಎಂದು ಯಡಿಯೂರಪ್ಪ ಎಂ.ಬಿ.ಪಾಟೀಲ್ ಅವರಿಗೆ ಮಾತಿನ ತಿವಿತ. ಈ ರೀತಿ ಶ್ರೀಗಳ ಹೆಸರು ಎಳೆದು ತರದೆ ಮೌನವಾಗಿರುವುದು ಪಾಟೀಲರಿಗೂ ಗೌರವ ತರುವ ಸಂಗತಿ. ಶ್ರೀಗಳ ಬಗ್ಗೆ ಮತ್ತೆ ಮಾತನಾಡುವ ಪ್ರಯತ್ನ ಮಾಡಿದ್ರೆ ರಾಜ್ಯದ ಯಾವುದೇ ಸಮಾಜದ ಬಂಧುಗಳು ಪಾಟೀಲರ ನಡುವಳುಕೆಯನ್ನ ಖಂಡಿಸುತ್ತಾರೆ.ಮೌನವಾಗಿರುವುದು ಶೋಭೆ ತರುವಂಥದ್ದು, ಅಖಿಲಭಾರತ ವೀರಶೈವ ಮಹಾಸಭಾ ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದರು ಅದಕ್ಕೆ ನಾವೆಲ್ಲ ಬದ್ದರಾಗಿರುತ್ತೇವೆಂದು ನಾವು ಈ ಹಿಂದೇನೆ ಹೇಳಿದ್ದೇವೆ. ರಾಜಕೀಯವಾಗಿ ಇದನ್ನು ಗೊಂದಲ ಮಾಡುವುದು ಸರಿಯಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here