ಸಾರಾಯಿ ನೈವೇದ್ಯ : ವಿಜಯಪುರ ಜಾತ್ರೆಯಲ್ಲಿ  ವಿಶೇಷ ಆಚರಣೆ

ವಿಜಯಪುರ ತಾಲೂಕು ಬಬಲಾದಿ ಗ್ರಾಮದ ಸದಾಶಿವ ಮುತ್ಯಾನ ಜಾತ್ರೆಯಲ್ಲಿ  ವಿಶೇಷ ಆಚರಣೆ ಪ್ರತಿ ವರ್ಷ ನಡೆಯುತ್ತದೆ. ಜಾತ್ರೆಯಲ್ಲಿ ಭಕ್ತರು ಸಾರಾಯಿಯನ್ನೆ ದೇವರಿಗೆ ನೈವೇಧ್ಯವಾಗಿ ಅರ್ಪಿಸುತ್ತಾರೆ. ಪ್ರತಿ ವರ್ಷ ಬಬಲಾದಿ ಗ್ರಾಮದಲ್ಲಿ ಸಿದ್ದಿ ಪುರುಷ, ಕಾಲಜ್ಞಾನಿ ಸದಾಶಿವ ಮುತ್ಯಾನವರ ಜಾತ್ರೆಯನ್ನ ವಿಜೃಂಭನೆಯಿಂದ ಆಚರಿಸಿಲಾಗಿದ್ದು. ಶಿವರಾತ್ರಿಯ ನಂತರ 5 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ  ಸಾವಿರಾರು ಭಕ್ತರು ತೆಂಗಿನಕಾಯಿ, ಹೂವಿನ ಜೊತೆಗೆ ಸಾರಾಯಿ ಬಾಟಲಿಗಳನ್ನ ಸದಾಶಿವ ಮುತ್ಯಾನಿಗೆ ಅರ್ಪೀಸೋದು ವಾಡಿಕೆಯಾಗಿದೆ. ಸರತಿ ಸಾಲಿನಲ್ಲಿ ನಿಂತು ತಮ್ಮ ಕೈಯಲ್ಲಿನ ಸಾರಾಯಿ ಬಾಟಲಿಗಳಿಂದ ಒಂದಿಷ್ಟು ಮಧ್ಯವನ್ನ ಸದಾಶಿವ ಮುತ್ಯಾ, ಹಾಗೂ ಶಕ್ತಿ ದೇವತೆ ಚಂದ್ರವ್ವ ತಾಯಿ ಗದ್ದುಗೆಯ ಎದುರಿಗಿಟ್ಟಿರುವ ಹಿತ್ತಾಳೆ ಪಾತ್ರೆಗೆ ಸುರಿಯುತ್ತಾರೆ. ಈ ಜಾತ್ರೆ ನೂರಾರು ವರ್ಷಗಳಿಂದ ಹೀಗೆ ನಡೆದುಕೊಂಡು ಬರ್ತಿರೋದು ಮತ್ತೊಂದು ವಿಶೇಷ…

ಇಲ್ಲಿ ಬರುವ ಭಕ್ತರು ಹೀಗೆ ಸಾರಾಯಿಯನ್ನ ಪವಾಡ ಪುರುಷ, ಕಾಲಜ್ಞಾನಿ ಸದಾಶಿವ ಅಜ್ಜನವರಿಗೆ ನೈವೇಧ್ಯವಾಗಿ ಅರ್ಪಿಸೋದರ ಹಿಂದೆ ವಿಶಿಷ್ಠ ಹಿನ್ನಲೆ ಅಡಗಿದೆ. ಅದೇನಂದ್ರೆ ನೂರಾರು ವರ್ಷಗಳ ಹಿಂದೆ ಆಧ್ಯಾತ್ಮ ಸಾಧನಾಗಿದ್ದ ಸದಾಶಿವ ಮುತ್ಯಾ ಬಬಲಾದಿ ಗ್ರಾಮಕ್ಕೆ ಕಾಲಿಟ್ಟಾಗ ಗ್ರಾಮಸ್ಥರು ಮುತ್ಯಾನ ವಾಸಕ್ಕೆ ಅಡ್ಡಿ ಪಡೆಸಿದ್ದರು. ಈ ವೇಳೆ ಸದಾಶಿವ ಮುತ್ಯನವರು ತಮ್ಮ ಬಳಿಯ ಅಗಾದ ಶಕ್ತಿಯಿಂದ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದ ಕೃಷ್ಣಾ ನದಿಯ ನೀರನ್ನೆಲ್ಲ ಸಾರಾಯಿಯನ್ನಾಗಿ ಪರಿವರ್ತಿಸಿ ಪವಾಡ ಸೃಷ್ಠಿಸಿದ್ದಂತೆ. ಮುತ್ಯಾನ ಪವಾಡ ಕಂಡಿದ್ದ ಗ್ರಾಮಸ್ಥರು ಅಂದಿನಿಂದ ಸದಾಶಿವ ಮುತ್ಯಾನನ್ನ ಪೂಜಿಸಲು ಆರಂಭಿಸಿದ್ದರಂತೆ. ತಮ್ಮ ಆಧ್ಯಾತ್ಮಿಕ ಶಕ್ತಿಯಿಂದಲೆ ಸದಾಶಿವ ಮುತ್ಯಾ ಇದೇ ಗ್ರಾಮದಲ್ಲಿ ಸಜೀವ ಸಮಾಧಿಯಾದರು ಎನ್ನುವ ಐತಿಹ್ಯವು ಇದೆ. ಅವರು ಜೀವಂತವಾಗಿ ಸಮಾಧಿಯಾದ ಸ್ಥಳದಲ್ಲೆ ಸಧ್ಯ ಮಠ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಜಾತ್ರೆಯಲ್ಲಿ ಭಕ್ತರು ಸಾರಾಯಿಯನ್ನೆ ಮುತ್ಯಾನ ಗದ್ದುಗೆಗೆ ಅರ್ಪಿಸುತ್ತಾರೆ. ಇನ್ನು ಜಾತ್ರೆಯಲ್ಲಿ ಕೋಟ್ಯಾಂತರ ಮೌಲ್ಯದ ಸಾರಾಯಿ ಮಾರಾಟವಾಗುತ್ತೆ. ಈ ಹಿಂದೆ ಇದೇ ಜಾತ್ರೆಯಲ್ಲಿ ಅಕ್ರಮವಾಗಿ ಕಳ್ಳ ಭಟ್ಟಿ ಮಾರಾಟವಾಗ್ತಿತ್ತು. ಹೀಗಾಗಿ ಈ ಅಕ್ರಮಕ್ಕೆ ಕಡಿವಾಣ ಹಾಕುವ ದೃಷ್ಠಿಯಿಂದ ಅಬಕಾರಿ ಇಲಾಖೆಯೇ  ಸಾರಾಯಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ…

ಈ ವಿಶೇಷ ಜಾತ್ರೆಗೆ ಬೆಳಗಾವಿ, ಗುಲ್ಬರ್ಗ, ಬೀದರ್ ಸೇರಿದಂತೆ ಮಹಾರಾಷ್ಟ್ರದಿಂದಲು ಭಕ್ತರು ಬರುತ್ತಾರೆ. ಬಡವರು ಕಡಿಮೆ ದರದ ಸಾರಾಯಿಯನ್ನ ಅರ್ಪಿಸಿದರೆ, ಶ್ರೀಮಂತ ಭಕ್ತರು ಸಾವಿರಾರು ರೂ. ಮೌಲ್ಯದ ವಿಸ್ಕಿ, ಸ್ಕಾಚ್,ವೈನ್, ಬೀರ್ ಗಳನ್ನ ಸಮರ್ಪಿಸಿ ಮುತ್ಯಾನ ಕೃಪೆಗೆ ಪಾತ್ರರಾಗ್ತಿದ್ದಾರೆ.. ಆದ್ರೆ ಜಾತ್ರೆಯಲ್ಲಿ ಮಧ್ಯವನ್ನ ಕೇವಲ ದೇವರ ನೈವೇಧ್ಯಕ್ಕೆ ಸೀಮಿತಗೊಳಿಸಿ ಸಾಮೂಹಿಕ ಪಾನಕ್ಕೆ ಕಡಿವಾಣ ಹಾಕಬೇಕು ಅನ್ನೋದು ಸಮಾಜಮುಖಿ ಸಂಘಟನೆಗಳು ಆಗ್ರಹವಾಗಿದೆ…