ಕೆಲಸ ಮಾಡಲಾಗದಿದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ.. ಆ ಶಾಸಕನಿಗೆ ಗ್ರಾಮಸ್ಥರ ತೀವ್ರ ತರಾಟೆ!! ಬೆದರಿ ಕಾಲ್ಕಿತ್ತ ಶಾಸಕ…

ಅತ್ತೆಗೆ ಒಂದು ಕಾಲ ಆದ್ರೆ. ಸೊಸೆಗೂ ಒಂದು ಕಾಲ.. ಹಾಗೆಯೇ ಜನಪ್ರತಿನಿಧಿಗಳಿಗೆ ಒಂದು ಕಾಲ ಅದ್ರೆ. ಮತದಾರರಿಗೂ ಒಂದು ಕಾಲ ಬರುತ್ತೆ ಅನ್ನೊದಕ್ಕೆ ಇದು ತಾಜಾ ಉದಾಹರಣೆ. ಹೌದು ಕ್ಷೇತ್ರದ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದ ಶಾಸಕರು, ಮತ ಕೇಳಲು ಬಂದಾಗ ಮತದಾರರು ಶಾಸಕರ ಬೆವರಿಳಿಸಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ಕ್ಷೇತ್ರದ ಅತ್ತಿಹಳ್ಳಿಯಲ್ಲಿ ನಡೆದಿದೆ, ಮತಕೇಳಲು ಬಂದ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿಯನ್ನ ಅಡ್ಡಗಟ್ಟಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ್ರು.

ಕೆಲಸಮಾಡಲಾಗದಿದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ದಶಕಗಳ ಕಾಲ ಶಾಸಕರಾಗಿದ್ರೂ ಒಂದು ರಸ್ತೆಮಾಡಲಾಗಲ್ಲಿಲ್ಲ.. ಮತಗಳನ್ನ ನಮ್ಮ ಬಳಿ ಹೇಗೆ ಕೇಳ್ತಿರಾ… ಎಲ್ಲಾರು ಅಷ್ಟೇ ಈ ಬಾರಿ ನಾವು ಯಾರಿಗೂ ಮತ ಹಾಕಲ್ಲ ಎಂದು ಆಸಮಾಧಾನ ವ್ಯಕ್ತಪಡಿಸಿದ್ರು… ಇನ್ನು ಈ ಸಮಯದಲ್ಲಿ ಶಾಸಕರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು..

 

 

ಜನರ ಮಾತಿನ ತೀರ್ವತೆಗೆ ಕಕ್ಕಾಬಿಕ್ಕಿಯಾದ ಶಾಸಕರು ಹೇಳುವಷ್ಟು ಹೇಳಿ ಕಡೆಗೆ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್ಸು ಮರಳಿದ್ದಾರೆ. ಜಿಲ್ಲೆಯ ಗಡಿಗ್ರಾಮವಾದ ಅತ್ತಿಹಳ್ಳಿ, ಯರಗಿಹಳ್ಲಿ ಗ್ರಾಮಗಳಲ್ಲಿ  ಸುಮಾರು ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ ಶಾಲೆಯಿದೆ ಆದ್ರೆ ಕಟ್ಟಡಗಳು ಮುರಿದುಬಿದ್ದಿವೆ, ಆಸ್ಪತ್ರೆಯಿದೆ,  ವೈದ್ಯರೇ ಇಲ್ಲಾ, ಗ್ರಾಮಕ್ಕೆ ಒಂದೇ ಒಂದು ರಸ್ತೆಯೂ ಇಲ್ಲಾ, ಮಲ್ನಾಡು ಗ್ರಾಮವಾದ್ರೂ ಕುಡಿಯಲು ನೀರಿಲ್ಲ,ನಿತ್ಯವೂ ಕಾಡಾನೆ ಸೇರಿ ಪ್ರಾಣಿಗಳ ಹಾವಳಿಯಿಂದ ಜನರು ತತ್ತರಿಸಿದ್ದಾರೆ…

ಇಷ್ಟೆಲ್ಳಾ ಸಮಸ್ಯೆಗಳಿದ್ದರೂ ಯಾರೊಬ್ಬ ಜನಪ್ರತಿನಿಧಿಯೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಧು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ..