10 ವರ್ಷದ ಬಳಿ ಮತ ಕೇಳೋಕೆ ಬಂದಿದ್ದೀರಾ?- ಗ್ರಾಮಸ್ಥರ ಪ್ರಶ್ನೆಗೆ ತತ್ತರಿಸಿದ ಸಚಿವರು!!

ಕಳೆದೆರಡು ತಿಂಗಳಿನಿಂದ ಸಚಿವ ಎ.ಮಂಜು ಅದೃಷ್ಟ ಕೆಟ್ಟಂತಿದೆ. ಹೌದು ಹೋದಲೆಲ್ಲಾ ಸಚಿವ ಎ.ಮಂಜುಗೆ ಮುಖಭಂಗವಾಗುತ್ತಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿಚಾರದಲ್ಲಿ ಹಲವಾರು ಭಾರಿ ಮುಖಭಂಗ ಎದುರಿಸಿದ ಸಚಿವ ಎ.ಮಂಜು ಗೆ ಇದೀಗ ಮತಯಾಚನೆಗೆ ಹೋದಾಗ ಜನರಿಂದಲೂ ಅವಮಾನವಾಗಿದ್ದು, ಎ.ಮಂಜು ಮುಜುಗರ ಎದುರಿಸಿದ್ದಾರೆ.

ಹೌದು ಈಗಾಗಲೇ ಚುನಾವಣೆ ಸಿದ್ಧತೆ ನಡೆಸುತ್ತಿರುವ ಸಚಿವ ಎ.ಮಂಜು ಅರಕಲಗೂಡು ಪಟ್ಟಣದ 13 ನೇ ವಾರ್ಡ್​ ನ ಕೊಲ್ಲೂರಿನಲ್ಲಿ ಮತ ಕೇಳಲು ಹೋಗಿದ್ದರು. ಆದರೇ ಅಭಿವೃದ್ಧಿ ಕಾಣದೇ ಕಂಗೆಟ್ಟಿದ್ದ ಗ್ರಾಮಸ್ಥರು ಸಚಿವ ಎ.ಮಂಜು ಮುಖ ಕಾಣುತ್ತಿದ್ದಂತೆ ಆಕ್ರೋಶಗೊಂಡಿದ್ದಾರೆ. ಅಷ್ಟೇ ಅಲ್ಲ ಎ.ಮಂಜುಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವರಿಗೆ ಆಕ್ರೋಶದಿಂದ ಅಭಿವೃದ್ಧಿ ಕಾರ್ಯಗಳ ವಿವರಣೆ ಕೇಳಿದ ಗ್ರಾಮಸ್ಥರು, ಹತ್ತು ವರ್ಷದಿಂದ ನಾಪತ್ತೆಯಾಗಿದ್ದೋರು ಈಗ ಬಂದಿದ್ದಿರಾ, ನೀವು ನಮ್ಮ ವಾರ್ಡಗೆ ಏನು ಮಾಡಿದ್ದೀರಿ ಹೇಳಿ? ಈಗ ಮತ ಕೇಳೋಕೆ ಬಂದಿದ್ದೀರಾ..? ಅಂತ ಜನರು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಸಚಿವ ಎ.ಮಂಜು ತಬ್ಬಿಬ್ಬಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಒಟ್ಟಿನಲ್ಲಿ ಹೋದಡೆಯೆಲ್ಲಾ ಸಚಿವ ಎ.ಮಂಜು ಅವಮಾನ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.