ವಿಶ್ವಕಪ್ ಬಿಟ್ಟು ಪತ್ನಿ ಅನುಷ್ಕಾ ಜೊತೆ ವಿರಾಟ್ ಸುತ್ತಾಟ! ಲಂಡನ್ ನಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ ಈ ಜೋಡಿ!!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಸದ್ಯ ಲಂಡನ್ ನಲ್ಲಿ ರೋಮ್ಯಾಂಟಿಕ್ ಮೂಡ್​ನಲ್ಲಿದ್ದಾರೆ.

ad

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲ ದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿರುವ ಖುಷಿಯಲ್ಲಿರು ವಿರಾಟ್ ಸ್ವಲ್ಪ ರಿಲಾಕ್ಸ್ ಆಗಿದ್ದಾರೆ. ಇದೇ ವೇಳೆ ನಾಯಕ ವಿರಾಟ್​ ಲಂಡನ್​ನಲ್ಲಿ ಪುಲ್​ ಎಂಜಾಯ್​ ಮಾಡುತ್ತಿದ್ದು, ಪತ್ನಿ ಅನುಷ್ಕಾ ಕೂಡ ಪತಿಗೆ ಸಾಥ್ ನೀಡಿದ್ದಾರೆ.

ಇನ್ನೂ ಲಂಡನ್ ಬೀದಿ ಬೀದಿಗಳಲ್ಲಿ ಸುತ್ತಾಡುತ್ತಿರುವ ಅನುಷ್ಕಾ , ವಿರಾಟ್ ಜೋಡಿ ಜೋಲಿ ಮೂಡ್ ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ಪತ್ನಿ ಅನುಷ್ಕಾ ಜೊತೆ ಸುತ್ತಾಡಿತ್ತಿರುವ ಪೋಟೋವನ್ನ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಇದುವರೆಗೂ ಇವರಿಬ್ಬರ ಫೋಟೋಗೆ 40ಲಕ್ಷಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ.

View this post on Instagram

Mr and Mrs 💑❤

A post shared by Virat Kohli (@virat.kohli) on

ಸದ್ಯ ಇದೇ ಶನಿವಾರ ವಿಶ್ವ ಕಪ್ ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಸೆಮಿ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದೆ.