ಉತ್ತರ ಕರ್ನಾಟಕದಲ್ಲಿ ಚಾಣಕ್ಯನ ಲೆಕ್ಕಾಚಾರ… ಮಠ, ಮಂದಿರ ರೋಡ್ ಶೋ ಸೇರಿದಂತೆ ಸಂವಾದ ಕಾರ್ಯಕ್ರಮ… ಎರಡು ದಿನ ಅಮಿತ್ ಶಾ ಮಾಡಲಿದ್ದಾರೆ ಮಿಂಚಿನ ಸಂಚಾರ…

ಕರ್ನಾಟಕದಲ್ಲಿ ಕಮಲದ ಹೂ ಅರಳಿಸಲು‌ ಪಣ ತೊಟ್ಟಿರುವ ಅಮಿತ್ ಶಾ ಎರಡು‌ ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ವಿದ್ಯಾಕಾಶಿ ಧಾರವಾಡ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಠ ಸಂವಾದ, ರೋಡ್ ಶೋ ದಲ್ಲಿ ಭಾಗಿಯಾಗಲಿದ್ದಾರೆ.

ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸಂಸದ ಪ್ರಲ್ಹಾದ ಜೋಶಿ ಸುದ್ಧಿಗೋಷ್ಠಿ ನಡೆಸಿ ಹೇಳಿದ್ದಾರೆ. ಇಂದು ರಾತ್ರಿ 10.30ಕ್ಕೆ ಹುಬ್ಬಳ್ಳಿಗೆ ಬಂದಿಳಿಯುವ ಅಮಿತ್ ಶಾ ಎರಡು ದಿನಗಳ ಕಾಲ ಬೆಳಗಿನಿಂದ ರಾತ್ರಿವರೆಗೆ ಎಡಬಿಡದೇ ಪ್ರವಾಸ ಮಾಡಲಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಸೆಳೆಯಲು ತಕ್ಕಂತೆ ಮಠ ಮಂದಿರ ಸಂವಾದ ಕಾರ್ಯಕ್ರಮ ಸೇರಿದಂತೆ ರೋಡ್ ಶೋ ಮಾಡಲ್ಲಿದ್ದಾರೆ..

ಏಪ್ರಿಲ್ 12 ರಂದು ಬೆಳಗ್ಗೆ 9.40 ಕ್ಕೆ ಶಾ ಅವರು ಹುಬ್ಬಳ್ಳಿಯಲ್ಲಿ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ‌ ದರ್ಶನ ಪಡೆದು, 10.30 ಕ್ಕೆ ಧಾರವಾಡದಲ್ಲಿ ಕವಿ ದ.ರಾ. ಬೇಂದ್ರೆ ಸ್ಮಾರಕಕ್ಕೆ ಭೇಟಿ ನೀಡುವರು. ತನ್ಮೂಲಕ ಮಠದ ಭಕ್ತರು ಹಾಗೂ ಕವಿ-ಸಾಹಿತಿಗಳ ಗಮನ ಸೆಳೆಯಲಿದ್ದಾರೆ. ನಂತ್ರ, ಕಾಂಗ್ರೆಸ್ ಸರ್ಕಾರದ ವಿಭಜನಕಾರಿ ರಾಜಕೀಯ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿರುವ ಒಂದು ತಾಸು ಸತ್ಯಾಗ್ರಹದಲ್ಲಿ ಸ್ವತಃ ಪಾಲ್ಗೊಳ್ಳುವರು.

ಧಾರವಾಡದಿಂದ ನೇರವಾಗಿ ಗದಗ ಜಿಲ್ಲೆ ರೋಣಕ್ಕೆ ತೆರಳಲಿರುವ ಅಮಿತ್ ಷಾ, ಅಲ್ಲಿ ಮುಷ್ಟಿಧಾನ್ಯ ಸಂಗ್ರಹ ಅಭಿ ಯಾನದ ಸಮಾರೋಪದಲ್ಲಿ ಪಾಲ್ಗೊಳ್ಳುವರು. ನಂತ್ರ ಗದಗ ಪುಟ್ಟರಾಜ ಗವಾಯಿ ಆಶ್ರಮ, ವೀರನಾರಾಯಣಸ್ವಾಮಿ ದೇವಸ್ಥಾನ, ಕುಮಾರವ್ಯಾಸನ ಸನ್ನಿಧಿಗೆ ನಮನ ಸಲ್ಲಿಸಿ, ಮೋಹನ ಮಾಳಶೆಟ್ಟಿ ಯವರ ನಿವಾಸಕ್ಕೆ ಭೇಟಿ ನೀಡಿ ಪುನಃ ಹುಬ್ಬಳ್ಳಿಗೆ ಬರಲಿದ್ದಾರೆ. ಮತ್ತೆ ಸಂಜೆ 4.50ಕ್ಕೆ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ, 5.15ಕ್ಕೆ ರೋಡ್‍ಶೋದಲ್ಲಿ ಪಾಲ್ಗೊಳ್ಳುವರು. ಸಂಜೆ ಧಾರವಾಡ ತಾಲೂಕು ಹೆಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ ಹಾಗೂ ರಾತ್ರಿ ಹುಬ್ಬಳ್ಳಿಯಲ್ಲಿ ಉದ್ಯಮಿಗಳು-ವ್ಯಾಪಾರಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ, ನಗರದಲ್ಲೇ ತಂಗುವರು.

ಏಪ್ರಿಲ್ 13 ರಂದು ಅವರು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ವಿವಿಧೆಡೆಗೆ ಭೇಟಿ ನೀಡಲಿದ್ದು, ಬಿಜೆಪಿ ಕೋಟೆಯನ್ನ ಭದ್ರಪಡಿಸುವ ನಿಟ್ಟಿನಲ್ಲಿ ಚಾಣಕ್ಯ ಉತ್ತರ ಕರ್ನಾಟಕ ಭಾಗದಲ್ಲೇ ಪ್ರಚಾರ ನಡೆಸಲಿದ್ದಾರೆ. ಅಲ್ದೆ, ಸ್ವತಃ ಷಾ ಅವರೇ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡ್ತಿರೋದ್ರಿಂದ ಹಲವು ಕಾಂಗ್ರೆಸ್ ನಾಯಕಿಗೆ ನಡುಕ ಪ್ರಾರಂಭವಾಗಿದೆ ಎಂದ್ರೆ ತಪ್ಪಾಗಲಾರದು..

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ..