ಈ ದೃಶ್ಯ ನೋಡಿದ್ರೆ ಖಂಡಿತ ಬೆಚ್ಚಿ ಬೀಳ್ತೀರಿ. ಅಮೆರಿಕಾದ ವಾಷಿಂಗ್ಟನ್​ ಬಳಿಯ ಮ್ಯೂಕೆಲಿಯೊಟ್​ನಲ್ಲಿ ಲಘು ವಿಮಾನವೊಂದು ಪತನಗೊಂಡಿದೆ. ಪಿಎ-32 ಹೆಸರಿನ 6 ಆಸನಗಳುಳ್ಳ ಈ ಲಘು ವಿಮಾನ ಲ್ಯಾಂಡ್ ಆಗೊವಾಗ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ವಿಮಾನದ ರೆಕ್ಕೆ ವಿದ್ಯುತ್ ಕಂಬಕ್ಕೆ ತಾಗಿದೆ. ಕಂಬಕ್ಕೆ ರೆಕ್ಕೆ ತಾಗ್ತಾ ಇದ್ದಂತೆ ಬೆಂಕಿ ಹೊತ್ತು ಉರಿದು ನೆಲಕ್ಕಪ್ಪಳಿಸಿದೆ. ಈ ದೃಶ್ಯವನ್ನ ಹೈವೆನಲ್ಲಿ ಸಾಗ್ತಿದ್ದ ವಾಹನ ಸವಾರರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here