ಜಯಲಲಿತಾ ಚಿಕಿತ್ಸೆ ವಿಡಿಯೋ ಬಿಡುಗಡೆ : ಉಪಚುನಾವಣೆಗೆ ಬಳಕೆಯಾದ ತಮಿಳ್ ಅಮ್ಮ !!

ಬರೋಬ್ಬರಿ ಒಂದು ವರ್ಷದ ಬಳಿಕ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಾವಳಿಯನ್ನು ಬಿಡುಗಡೆ ಮಾಡಲಾಗಿದೆ.

ಟಿಟಿವಿ ದಿನಕರನ್ ಆಪ್ತ ಶಾಸಕ ವೆಟ್ರಿವೇಲು ಇಂದು ವಿಡಿಯೋ ಬಿಡುಗಡೆ ಮಾಡಿದ್ದು, ಹಲವು ಪ್ರಶ್ನೆ ಅನುಮಾನಗಳನ್ನು ಸೃಷ್ಟಿಸಿದೆ. ಜಯಲಲಿತಾ ನಿಧನದಿಂದ ತೆರವಾಗಿರುವ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಉಪಚುನಾವಣೆ ನಡೆಯಲಿದೆ. ಎಐಎಡಿಎಂಕೆಯಿಂದ ಮಧುಸೂದನ್ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಶಶಿಕಲಾ ಆಪ್ತ ಟಿಟಿವಿ ದಿನಕರನ್ ಪಕ್ಷೇತರ ಅಭ್ಯರ್ಥಿಯಾಗಿದ್ದು ಮುರುದು ಗಣೇಶ್ ಡಿಎಂಕೆ ಅಭ್ಯರ್ಥಿಯಾಗಿದ್ದಾರೆ. ತಮಗೆ ಮತ ನೀಡುವುದರ ಮೂಲಕ ಅಮ್ಮನನ್ನು ಜೀವಂತವಾಗಿಡಬೇಕು ಎಂದು ಟಿಟಿವಿ ದಿನಕರನ್ ಪ್ರಚಾರದಲ್ಲಿ ನಿರತರಾಗಿದ್ದಾರೆ.

 

 ಇದು ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಆಪ್ತನಾಗಿರೋ ಎಐಎಡಿಎಂಕೆ ಅಧಿಕೃತ ಅಭ್ಯರ್ಥಿಗೆ ತೊಂದರೆಯಾಗುವ ಸಾದ್ಯತೆಗಳಿವೆ. ಆ ಕಾರಣಕ್ಕಾಗಿ ಪಳನಿ ಮತ್ತು ಪನೀರ್ ಬೆಂಬಲಿಗರು, ಟಿಟಿವಿ ದಿನಕರನ್ ಮತ್ತು ಶಶಿಕಲಾ ರವರೇ ಜಯಲಲಿತಾ ಸಾವಿಗೆ ಕಾರಣ, ಆಸ್ಪತ್ರೆಗೆ ತರೋ ಮೊದಲೇ ಜಯಲಲಿತಾರನ್ನು ಕೊಲ್ಲಲಾಗಿತ್ತು ಎಂದು ಪ್ರಚಾರ ಮಾಡಲಾರಂಬಿಸಿದರು. ಇದರಿಂದ ಕಂಗೆಟ್ಟ ಟಿಟಿವಿ ದಿನಕರನ್, ತನ್ನ ಆಪ್ತ ಶಾಸಕ ವೇಟ್ರಿವೇಲು ಮೂಲಕ ಆಸ್ಪತ್ರೆಯಲ್ಲಿ ಅಮ್ಮ ಚಿಕಿತ್ಸೆ ಪಡೆಯುತ್ತಿರೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಇನ್ನಷ್ಟು ಸಂಶಯಗಳನ್ನು ಹುಟ್ಟಿಸಿದೆ.