ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದ- ಬೆಂಕಿ‌ ಹಚ್ತಿನಿ ಅಂದ- ಇದು ಮತ್ತೊಬ್ಬ ಕಾಂಗ್ರೆಸ್ ನಾಯಕನ ಗೂಂಡಾಗಿರಿ!

Water Board member Narayanaswamy threatens to BBMP Office.

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಎಮ್​ಎಲ್​ಎ ಹ್ಯಾರೀಸ್​ ಪುತ್ರ ಮೊಹಮ್ಮದ್​ ನಲಪಾಡ್​ ಅಟ್ಟಹಾಸ ಮರೆಯುವ ಮುನ್ನವೇ ಸಚಿವ ಕೃಷ್ಣಭೈರೈಗೌಡರ್​ ಆಪ್ತನೊಬ್ಬ ಬಿಜೆಪಿ ಕಾರ್ಯಕರ್ತನ ವಿರುದ್ಧ ದೌರ್ಜನ್ಯ ಮೆರೆದಿದ್ದ.

 

ಇದೀಗ ಈ ಸಾಲಿಗೆ ಕಾಂಗ್ರೆಸ್​ನ ಇನ್ನೊಬ್ಬ ನಾಯಕ ಸೇರ್ಪಡೆಯಾಗಿದ್ದು, ಬಿಡಬ್ಲುಎಸ್​ಎಸ್​ಬಿ ಸದಸ್ಯ ನಾರಾಯಣಸ್ವಾಮಿ ಎಂಬಾತ ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಸಿ ದೌರ್ಜನ್ಯ ಮೆರೆದಿದ್ದಾನೆ.
ಹೌದು ನ್ಯಾಯಾಲಯದಲ್ಲಿರುವ ಪ್ರಕರಣವೊಂದರ ಸೈಟಿನ ಖಾತೆ ಬದಲಾವಣೆ ಮಾಡಿಲ್ಲ ಎಂಬ ಕಾರಣಕ್ಕೆ ಕಂದಾಯ ಇಲಾಖೆ ಕಚೇರಿಗೆ ತೆರಳಿದ ನಾರಾಯಣಸ್ವಾಮಿ ಪೆಟ್ರೋಲ್​ ಸುರಿದು ದಾಂಧಲೆ ನಡೆಸಿದ್ದಾನೆ. ಕೆಆರ್ ಪುರ ಕ್ಷೇತ್ರದ ಹೊರಮಾವು ವಾರ್ಡ್ ಕಚೇರಿಯಲ್ಲಿ ಶುಕ್ರವಾರ ಘಟನೆ ನಡೆದಿದೆ. ಕೆಆರ್ ಪುರ ಶಾಸಕ ಬೈರತಿ ಬಸವರಾಜ ಬಲಗೈ ಬಂಟ ನಾರಾಯಣಸ್ವಾಮಿ ಕೃತ್ಯ ನಡೆಸಿದ್ದಾರೆ. ಕಚೇರಿಯಲ್ಲಿ ಎಆರ್​ಓ ಚಂಗಲರಾಯಪ್ಪ ಮೇಲೆ ನಾರಾಯಣಸ್ವಾಮಿ ಕೂಗಾಡಿ ದೌರ್ಜನ್ಯ ನಡೆಸಿದ್ದಾರೆ.

 

ಶಾಸಕ ಭೈರತಿ ಬಸವರಾಜು ಆಪ್ತನಾಗಿರುವ ಕಾರಣಕ್ಕೆ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ. ಇದೀಗ ಈ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು, ಬಹಿರಂಗವಾಗಿ ನಾರಾಯಸ್ವಾಮಿ ಪೆಟ್ರೋ ಸುರಿಯೋದು ಹಾಗೂ ಬೆಂಕಿ ಹಚ್ಚುವ ಬೆದರಿಕೆ ಹಾಕಿರೋದು ದಾಖಲಾಗಿದೆ. ಇದೀಗ ಮಾಧ್ಯಮಗಳಲ್ಲಿ ಪ್ರಕಟವದ ಸುದ್ದಿ ಆಧರಿಸಿ ಜಂಟಿ ಆಯುಕ್ತರಾದ ವಾಸಂತಿ ಅಮರ್ ರಾಮಮೂರ್ತಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.  ಜೊತೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಹ ತಪ್ಪಿತಪ್ಪಿತಸ್ಥ ವಿರುದ್ಧ ಕ್ರಮಕ್ಕೆ ಆದೇಶ ಹೊರಡಿಸಿದ್ದು ಸದ್ಯ ಆರೋಪಿ ನಾರಾಯಣಸ್ವಾಮಿ ತಲೆ ಮರೆಸಿಕೊಂಡಿದ್ದಾರೆ.ಪ್ರಕರಣದಿಂದ ಭಯಪಟ್ಟ ಅಧಿಕಾರಿ ಆರ್ ಓ ಚಂಗಲರಾಯಪ್ಪ ತುರ್ತು ವರ್ಗಾವಣೆ ಮಾಡಿಸಿ ಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಕಾಂಗ್ರೆಸ್ಸಿಗರ ದೌರ್ಜನ್ಯದ ವಿಡಿಯೋಗಳು ಒಂದೊಂದಾಗಿ ಹೊರಬೀಳುತ್ತಿದ್ದು, ಆಡಳಿತ ಪಕ್ಷದ ತೀವ್ರ ಮುಜುಗರಕ್ಕೆ ಕಾರಣವಾಗಿದೆ.