ಸ್ಮಾರ್ಟ್​ ಸಿಟಿ ಅಧಿಕಾರಿಗಳು ಅಂತ ಬಂದೋರು ಏನು ಮಾಡಿದ್ರು ಗೊತ್ತಾ?!

 

ಸ್ಮಾರ್ಟ್ ಸಿಟಿಯತ್ತ ಹೆಜ್ಜೆಯಾಕುತ್ತಿರೋ ತುಮಕೂರಿನಲ್ಲಿ ಇತ್ತೀಚಿನದಿನಗಳಲ್ಲಿ ಸ್ಮಾರ್ಟ್ ಕ್ರೈಂ ಗಳು ಸದ್ದಿಲ್ಲದೇ ಬೆಳಕಿಗೆ ಬರ್ತಿವೆ.. ಸ್ಮಾರ್ಟಾಗೇ ಬರೋ‌ ಕಳ್ಳರು ಸ್ಮಾರ್ಟ್ ಸಿಟಿ ಹೆಸರನ್ನೇ ಹೇಳಿಕೊಂಡು ಬಂದ ಕಳ್ಳರು ಒಂದಲ್ಲಾ ಎರಡಲ್ಲ ಬರೊಬ್ಬರಿ ನಲವತ್ತು‌ಲಕ್ಷ ಬೆಲೆ ಬಾಳುವ ಬಂಗಾರ‌ ಕದ್ದು ಎಸ್ಕೆಪಾಗಿದ್ದಾರೆ.
ನಗರದ‌ ಬಿಹೆಚ್ ರಸ್ತೆ‌ ಪಕ್ಕದಲ್ಲೇ ಇರೋ ಆಗಮನ ಹೊಟೆಲ್ ನ ಹಿಂಬಾಗದಲ್ಲಿರೋ ಈ ಮನೆಯಲ್ಲಿ ಕಳೆದ ಕೆಲ ದಿನಗಳಿಂದ 75 ವರ್ಷದ ಟಿ.ಡಿ ಮನೋಹರ ಎಂಬ ವೃದ್ಧೆ ವಾಸವಾಗಿದ್ದಾರೆ. ವೃದ್ಧೆ ಒಬ್ಬರೇ‌ ಇರೋದನ್ನೆ ಗಮನಿಸಿದ್ದ ಕಳ್ಳರು ನಿನ್ನೆ ಮಧ್ಯಾಹ್ನ ನಾವು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ನಿಮ್ಮ ಮನೆಯ ಯುಜಿಡಿ ಕನೆಕ್ಷನ್ ಚೆಕ್ ಮಾಡ್ಬೇಕಾಗಿತ್ತು ಅಂತ ಒಳಹೋಗಿದ್ದಾರೆ ಅಷ್ಟೆ ಅಜ್ಜಿಯನ್ನ‌ ಅದು ಇದು ಕೇಳೋತರ ಯಾಮಾರಿಸಿ ತಮಗೇನ್ಬೇಕೋ ಅದನ್ನೆಲ್ಲಾ ದೋಚಿ ಗಂಟುಮೂಟೆ ಕಟ್ಟಿದ್ದಾರೆ.

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಬಂದ ಕಳ್ಳರು ದೋಚಿ ಪರಾರಿಯಾದ ಬಳಿಕ ವೃದ್ಧೆಗೆ ತಾವು ಮೋಸಹೋಗಿರೋದು ಅರಿವಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಇನ್ನೊಂದೆಡೆ ಪ್ರಧಾನಮಂತ್ರಿ ಸ್ಮಾರ್ಟ್​ ಸಿಟಿ ಯೋಜನೆಯಡಿ ಆಯ್ಕೆಯಾದ ಈ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು ನಿಧಾನಗತಿಯಲ್ಲಿ ನಡಿತಾ ಇರೋದೆ ಈ ರೀತಿಯ ಅವಾಂತರಗಳಿಗೆ ಕಾರಣ  ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.