ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರಧಾನಿ ಮೋದಿಯವರಿಗೆ ಸವಾಲೆಸೆದಿದ್ದಾರೆ. ಅದ್ಯಾವ ಸವಾಲು ಎಸೆದ್ರು ಅಂದ್ರಾ ಪ್ರಧಾನಿ ಮೋದಿಗೆ ವಿರಾಟ್ ಫಿಟ್ನೆಸ್ ಸವಾಲೆಸೆದಿದ್ದಾರೆ. ಕೇವಲ ಮೋದಿಗೆ ಮಾತ್ರವಲ್ಲದೇ ಧೋನಿಗೂ ಫಿಟ್ನೆಸ್ ಸವಾಲೆಸಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂಬ ಅಭಿಯಾನದ ಅಡಿಯಲ್ಲಿ ಎಲ್ಲ ಭಾರತೀಯರು ತಮ್ಮ ಫಿಟ್ನೆಸ್ ಮಂತ್ರದ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳಲು ಟ್ವಿಟರ್ನಲ್ಲಿ ಕರೆ ನೀಡಿದ್ದರು. ಅಲ್ದೆ ವಿರಾಟ್ ಕೊಹ್ಲಿ, ಸೈನಾ ನೆಹ್ವಾಲ್, ನಟ ಹೃತಿಕ್ ರೋಶನನ್ಗೆ ಈ ಫಿಟ್ನೆಸ್ ಸವಾಲನ್ನು ಮುಂದುವರಿಸಿಕೊಂಡು ಹೋಗುವಂತೆ ಟ್ವೀಟ್ ಮಾಡಿದ್ದರು. ಈ ಸವಾಲು ಸ್ವೀಕರಿಸಿದ ಕೊಹ್ಲಿ,ವ್ಯಾಯಾಮ ಮಾಡಿ ಆ ವಿಡಿಯೋವನ್ನು ಅನುಷ್ಕಾ ಶರ್ಮಾ, ಪ್ರಧಾನಿ ನರೇಂದ್ರ ಮೋದಿ, ಹಾಗೂ ದೋನಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಇನ್ನು ವಿರಾಟ್ ಈ ಸವಾಲಿಗೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ ಸಧ್ಯದಲ್ಲೇ ತಮ್ಮ ಫಿಟ್ನೆಸ್ ವಿಡಿಯೋವನ್ನು ಪೋಸ್ಟ್ ಮಾಡುವುದಾಗಿ ಉತ್ತರಿಸಿದ್ದಾರೆ.