ಪ್ರಜ್ವಲ್ ರೇವಣ್ಣ ಹುಟ್ಟುಹಬ್ಬಕ್ಕೆ ಭವಾನಿ ರೇವಣ್ಣನವರು ಕೊಟ್ಟ ಗಿಫ್ಟ್​ ಏನು ಗೊತ್ತಾ?!

 

ತಮ್ಮ ಮೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ರಕ್ತ ದಾನ ಶಿಬಿರ ಹಾಗೂ ಹಣ್ಣು ಹಂಪಲು ಹಂಚಿ ಆಚರಣೆ ಮಾಡೋದು ಸಾಮಾನ್ಯ.ಆದರೆ ಪ್ರೀತಿಯ ಮಗನ ಹುಟ್ಟು ಹಬ್ಬದ ಪ್ರಯುಕ್ತ ತಾಯಿ ತಮ್ಮ ಕಣ್ಣುಗಳನ್ನೇ ದಾನ ಮಾಡಿದ ವಿಭಿನ್ನ ಪ್ರಯತ್ನ ಹಾಸನದಲ್ಲಿ ನಡೆದಿದೆ. ಇಷ್ಟಕ್ಕೂ ಮಗನ ಹುಟ್ಟುಹಬ್ಬದ ಪ್ರಯುಕ್ತ ಕಣ್ಣುಗಳನ್ನು ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ? ಮತ್ಯಾರು ಅಲ್ಲ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ. ಹೌದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಮೊಮ್ಮಗ ಪ್ರಜ್ವಲ್​ ರೇವಣ್ಣ ಮೊನ್ನೆ ತಮ್ಮ 28 ವರ್ಷದ ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಪ್ರಜ್ವಲ್ ಬ್ರಿಗೇಡ್​ ವತಿಯಿಂದ ನೇತ್ರಾದಾನ ಶಿಬಿರ ಆಯೋಜಿಸಲಾಗಿತ್ತು.

 

ಈ ವೇಳೆ ಪ್ರಜ್ವಲ್ ಗೆ ವಿಶ್ ಮಾಡಲು ಬಂದಿದ್ದ 200 ಕ್ಕೂ ಹೆಚ್ಚು ಅಭಿಮಾನಿಗಳು ತಮ್ಮ ತಮ್ಮ ನೇತ್ರಾದಾನ ಮಾಡಿ ಪತ್ರಕ್ಕೆ ಸಹಿ ಮಾಡಿದ್ರು. ಈ ಅಭಿಮಾನಿಗಳ ಸಂಭ್ರಮ ನೋಡಿದ ಪ್ರಜ್ವಲ್ ಕೂಡ ತಮ್ಮ ಕಣ್ಣುದಾನ ಮಾಡಿ ಅಭಿಮಾನಿಗಳನ್ನ ಹುಬ್ಬೆರುವಂತೆ ಮಾಡಿದ್ರು.

ಇದೇ ವೇಳೆ ಪ್ರೀತಿಯ ಮಗನ ಹುಟ್ಟುಹಬ್ಬವನ್ನು ಸ್ಮರಣಿಯವಾಗಿಸುವ ನಿಟ್ಟಿನಲ್ಲಿ ಪ್ರಜ್ವಲ್​ ತಾಯಿ ಭವಾನಿ ರೇವಣ್ಣನವರು ಕೂಡ ತಮ್ಮ ಮರಣಾನಂತರ ಎರಡು ಕಣ್ಣುಗಳನ್ನು ದಾನ ಮಾಡಿ ಪತ್ರಕ್ಕೆ ಸಹಿ ಹಾಕಿದರು. ಈ ವಿಚಾರ ಇದೀಗ ಸಖತ್ ವೈರಲ್​ ಆಗಿದ್ದು, ಎಲ್ಲರೂ ಈ ಮಾದರಿಯನ್ನು ಅನುಸರಿಸಿದಲ್ಲಿ ಅಂಧರ ಬಾಳಿಗೆ ಬೆಳಕಾಗೋದರಲ್ಲಿ ಸಂದೇಹವಿಲ್ಲ.