ವಿಕ್ಟೋರಿಯಾ ಆಸ್ಪತ್ರೆ ತಲುಪುತ್ತಿದ್ದಂತೆ ಡಿ ಕೆ ಶಿವಕುಮಾರ್ ಗೆ ಬಿಪಿ ಜಾಸ್ತಿಯಾಗಲು ಕಾರಣವೇನು ಗೊತ್ತಾ ?

ನೂತನ ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಇಂದು ದಿಢೀರನೆ ವಿಕ್ಟೋರಿಯಾ ಆಸ್ಪತ್ರೆಯ ಪರಿಶೀಲನೆಗೆ ತೆರಳಿದರು. ಪರಿಶೀಲನೆ ಮಾಡುತ್ತಿದ್ದಂತೆ ಅವರಿಗೆ ತಲೆಸುತ್ತು ಬಂದ ಹಾಗಾಯ್ತು. ಅಲ್ಲೇ ವೈದ್ಯರ ಬಳಿ ಬಿಪಿ ಚೆಕ್ ಮಾಡಿಸಿದರೆ, ೧೭೦/೧೨೦ ಬಿಪಿ ಹೈ ಇದೆ ಎಂದರು ವೈದ್ಯರು ! ಈ ರೀತಿ ಬಿಪಿ ಹೈ ಆಗೋಕೆ ಕಾರಣ ಏನು ಗೊತ್ತಾ ?

adವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಡಿ ಕೆ ಶಿವಕುಮಾರ್ ಮಾತನಾಡಿದಾಗ ಭಯಾನಕ ಅಂಶಗಳು ತಿಳಿಯಿತು. ವೈದ್ಯರುಗಳು, ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ, ರೋಗಿಗಳಿಗೆ ವಾರ್ಡ್ ಗಳು, ಸ್ಪೆಷಲ್ ರೂಂ ಗಳು ಸಿಗುತ್ತಿಲ್ಲ ಎಂದು ರೋಗಿಗಳು, ಪೋಷಕರು ದೂರಿಕೊಂಡರು.

ರೋಗಿಗಳಿಗೆ ಕೊಠಡಿ ನೀಡಲು ಸಮಸ್ಯೆಯೇ ಇದೆಯೇ ಎಂದು ಸಚಿವರು ಪರಿಶೀಲಿಸಿದಾಗ ಡಿ ಕೆ ಶಿವಕುಮಾರ್ ರವರಿಗೆ ನಿಜಕ್ಕೂ ತಲೆಸುತ್ತು ಬಂತು. ಕೊಠಡಿಯನ್ನು ಲಾಡ್ಜ್ ರೀತಿಯಲ್ಲಿ ಇನ್ನೂರೋ, ಮುನ್ನೂರೊ ರೂಪಾಯಿಗಳಿಗೆ ಬಾಡಿಗೆ ನೀಡಲಾಗುತ್ತಿತ್ತು. ಇವೆಲ್ಲವನ್ನೂ ಗಮನಿಸಿದ ಸಚಿವರು, ಆಡಳಿತ ಮಂಡಳಿಗೆ ಖಡಕ್ ವಾರ್ನ್ ಮಾಡಿದರು. ವೈದ್ಯರು ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಬಳಸಿಕೊಳ್ಳಬೇಕು ಮತ್ತು ಕೊಠಡಿಗಳಲ್ಲಿ ಅವ್ಯವಹಾರ ನಡೆಸಬಾರದು ಎಂದು ಎಚ್ಚರಿಕೆ ನೀಡಿದರು.