ಬುರ್ಖಾ ಧರಿಸಿ ಮಸೀದಿ ಬಳಿ ಬಂದವನ ಕೈಯಲ್ಲೇನಿತ್ತು ಗೊತ್ತಾ?!

 

 

ಬೆಂಗಳೂರಿನಲ್ಲಿ ಬುರ್ಖಾ ಧರಿಸಿ ‌ಅನುಮಾನಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನ ಸಾರ್ವಜನಿಕರು ಹಿಡಿದು ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಇಂದು ಬೆಳಗ್ಗೆ ಎಚ್ ಬಿ ಆರ್ ಲೇಔಟ್ ಮಸೀದಿ ಬಳಿ ಬುರ್ಖಾ ಧರಿಸಿದ್ದ ಶಿವರಾಜ್ ಎಂಬಾತ ಬುರ್ಖಾ ಧರಿಸಿ ಬಂದಿದ್ದ. ಈ ವೇಲೆ ನಮಾಜ್ ಗೆ ಎಂದು ಬಂದಿದ್ದವರು ಇವನನ್ನು ಗಮನಿಸಿದ್ದಾರೆ ಈ ವೇಳೆ ಶಿವರಾಜ್ ಕಾಲಿಗೆ ಹವಾಯಿ ಚಪ್ಪಲಿ ಧರಿಸದ್ದನ್ಬ ನೋಡಿ ಅನುಮಾನಗೊಂಡ ಅಲ್ಲಿನ ಜನ ಹಿಡಿದು ಕೆ ಜಿ ಹಳ್ಳಿ ಪೊಲಿಒಸ್ರಿಗೆ ನೀಡಿದ್ದಾರೆ..

 

ಹತ್ಯೆಗೆ ನಡೆದಿತ್ತಾ ಸ್ಕೆಚ್..?
ಇದು ಪವಿತ್ರ ರಂಜಾನ್ ಉಪವಾಸದ ತಿಂಗಳಾದ್ದರಿಂದ ಸಾಕಷ್ಟು ಮಂದಿ ಮುಂಜಾನೆಯೆ ಪ್ರಾರ್ಥನೆಗೆಂದು ಮಸೀದಿ ಬಳಿ ಸೇರಿದ್ದರು. ಈ ವೇಳೆ ಇನ್ನೋವಾ ಕಾರೊಂದು ಮಸೀದಿ ಮುಂದೆ ನಾಲ್ಕೈದು ಬಾರಿ ಅನುಮಾನಸ್ಪದವಾಗಿ ತಿರುಗಾಡಿದೆ. ಅಲ್ಲದೆ ಅದೇ ಕಾರಿನಿಂದ ಶಿವರಾಜ್ ಇಳಿದು ಬಂದಿದ್ದ ಎಂದು ಅಲ್ಲಿಯ ಪ್ರತ್ಯಕ್ಷದರ್ಶಿಗಳ ಹೇಳ್ತಾ ಇದ್ದಾರೆ.. ಇದಲ್ಲದೆ ಆರೋಪಿ ಶಿವರಾಜ್ ಬಳಿ ಹರಿತವಾದ ಮಚ್ಷು ಹಾಗೂ ಅದನ್ನು ಉಪಯೋಗಿಸುವಾಗ ಬಳಸಲು ಹ್ಯಾಂಡ್ ಗ್ಲೌಸ್ ಎಲ್ಲವೂ ದೊರಕಿದ್ದು ಇದು ಯಾರನ್ನೊ ಕೊಲೆ ಮಾಡುವ ಉದ್ದೇಶ ಎಂದು ಪೊಲೀಸ್ರು ಶಂಕಿಸೊದ್ದಾರೆಸದ್ಯ ಈ ಕುರಿತು ಪ್ರಕರಣ ದಾಖಲಿಸಿರುವ ಕೆ ಜಿ ಹಳ್ಳಿ ಪೊಲೀಸ್ರು ಕಾರಿನ ನಂಬರ್ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆ ಮುಂದುವರೆದಿದ್ದು ಇನ್ನಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ