ವಾಟ್ಸಪ್​​ ಬಳಕೆದಾರರಿಗೆ ಕಾದಿದೆ ಅಪಾಯ! ನಿಮ್ಮ ಮೊಬೈಲ್​ನಲ್ಲಿರೋ ವಾಟ್ಸಪ್​​ ಮೇಲೆ ಬಿದ್ದಿದೆ ಇಸ್ರೇಲ್​​​ ಸ್ಪೈವೈರಸ್​​​​ ಕಣ್ಣು !!

ನೀವು ಆಂಡ್ರ್ಯಾಯ್ಡ್​​ ಮತ್ತು ವಾಟ್ಸಪ್​​ ಬಳಕೆದಾರರಾ? ಹಾಗಿದ್ದರೇ ನಿಮಗೆ ಖಂಡಿತಾ ಅಪಾಯ ಕಾದಿದೆ. ಹೌದು ನಿಮ್ಮ ಮೊಬೈಲ್​​ನ ವಾಟ್ಸಪ್​​ಗೆ ಬರುವ ಮಿಸ್ಡ್​ ಕಾಲ್​ ನಿಮಗೆ ಆಪತ್ತು ಹೊತ್ತು ತರಲಿದೆ. ಇಂತಹದೊಂದು ವಿಚಾರವನ್ನು ಸ್ವತಃ ವಾಟ್ಸಪ್​​​ ಕಂಪನಿಯೇ ಹೇಳಿಕೊಂಡಿದ್ದು, ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ.

ad

ವಿಶ್ವದಾದ್ಯಂತ ಬಳಕೆಯಾಗುತ್ತಿರುವ ವಾಟ್ಸಪ್​ಗೆ ಇಸ್ರೇಲ್​ ಮೂಲದ ಸ್ಪೈವೇರ್​ ವೈರಸ್​ ಅಟ್ಯಾಕ್​​ ಆಗಿದ್ದು, ಇದು ಒಂದೇ ಒಂದು ವಾಯ್ಸ್​ ಕಾಲ್ ಮೂಲಕ ನಿಮ್ಮ ಮೊಬೈಲ್​ ಗೆ ಎಂಟ್ರಿ ಆದಲ್ಲಿ ಎಲ್ಲ ಡಾಟಾಗಳನ್ನು ಹ್ಯಾಕ್​ ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
ನಿಮ್ಮ ವಾಟ್ಸಪ್​ಗೆ ಬರುವ ಈ ವಾಯ್ಸ್​ ಕಾಲ್​ನಿಂದ ಸ್ಪೈವೇರ್​​ ನಿಮ್ಮ ಮೊಬೈಲ್​ನಲ್ಲಿ ಇನ್ಸಾಲ್​​ ಆಗುತ್ತದೆ. ಬಳಿಕ ನಿಮ್ಮ ಖಾಸಗಿ ಮಾಹಿತಿಗಳು ಹಾಗೂ ಡಾಟಾಗಳು ಕೂಡ ಸೋರಿಕೆಯಾಗುತ್ತವೆ. ಇದನ್ನು ಸ್ವತಃ ವಾಟ್ಪಸ್​​ ಕಂಪನಿಯೇ ಖಚಿತಪಡಿಸುತ್ತಿದೆ.

ವಾಟ್ಸಪ್​ಗೆ ಇಸ್ರೇಲ್ ಮೂಲದ ಸ್ಪೈ ವೇರ್ ವೈರಸ್ ಅಟ್ಯಾಕ್ ಆಗಿದೆ. ಒಂದೇ ಒಂದು ವಾಯ್ಸ್ ಕಾಲ್ ಮೂಲಕ, ಸ್ಪೈವೇರ್ ನಿಮ್ಮ ಮೊಬೈಲ್ ನಲ್ಲಿ ಇನ್ಸ್​​ಟಾಲ್ ಆಗುತ್ತಿದೆ ಎಂದು ವಾಟ್ಸಪ್ ಕಂಪನಿ ಅಧಿಕೃತವಾಗಿ ಘೋಷಿಸಿದೆ. ಐಫೋನ್, ಆಂಡ್ರಾಯ್ಡ್​ ಫೋನ್​ಗಳಿಗೆ ಈ ವೈರಸ್ ಅಟ್ಯಾಕ್ ಆಗ್ತಿದ್ದು, ಸುಲಭವಾಗಿ ಡಾಟಾ ಹ್ಯಾಕ್ ಆಗ್ತಿದೆ ಎಂದು ಸಂಸ್ಠೆ ಬಳಕೆದಾರರಿಗೆ ಅಲರ್ಟ್ ನೀಡಿದೆ. ತಕ್ಷಣವೇ ವಾಟ್ಸಪ್ ಆಪ್ ಅಪ್​ಡೇಟ್ ಮಾಡಿಕೊಳ್ಳಿ ಎಂದು ವಾಟ್ಸಪ್ ಹೇಳಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನೂ ಭೇದಿಸಿ, ವೈರಸ್ ಅಟ್ಯಾಕ್ ಆಗ್ತಿರೋದು ತೀವ್ರ ಚಿಂತೆಗೆ ಕಾರಣವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.