ಆರ್.ಆರ್.ನಗರದಲ್ಲಿ ಮಾಳವಿಕಾ ಎಡವಿದ್ದೆಲ್ಲಿ ಗೊತ್ತಾ?!

 

ಚುನಾವಣೆಗೂ ಮುನ್ನ ನಕಲಿ ಎನ್ನಲಾದ ಓಟರ್ ಐಡಿ ಕಾರ್ಡ್​ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಆರ್.ಆರ್.ನಗರ ಚುನಾವಣೆ ಇಂದು ನಡೆದಿದ್ದು, ಮತದಾನ ಬಿರುಸಿನಿಂದ ಸಾಗಿದೆ. ನಟಿ ಅಮೂಲ್ಯ ಸೇರಿದಂತೆ ಹಲವು ಸೆಲಿಬ್ರೆಟಿಗಳು ಮತದಾನ ಮಾಡಿದರು.

 

ಇನ್ನು ಮತದಾನಕ್ಕೆ ಆಗಮಿಸಿದ್ದ ಕಿರು ಹಾಗೂ ಹಿರಿ ತೆರೆ ನಟಿ ಮಾಳವಿಕಾ ಮತದಾನಕ್ಕೆ ತೆರಳುವ ವೇಳೆ ಎಡವಿ ಬಿದ್ದ ಘಟನೆ ನಡೆಯಿತು. ಹೌದು ಮೌಂಟ್ ಕಾರ್ಮೆಲ್​ ಕಾಲೇಜ ಬಳಿ ಮತಚಲಾಯಿಸಲು ಮಾಳವಿಕಾ ಪತಿ ಹಾಗೂ ನಟ ಅವಿನಾಶ್ ಜೊತೆ ಆಗಮಿಸಿದ್ದರು. ಆದರೇ ಮೆಟ್ಟಿಲು ಹತ್ತುವಾಗ ಎಡವಿ ಬಿದ್ದರು. ತಕ್ಷಣ ಅಲ್ಲಿದ ಸ್ಥಳೀಯರು ಮಾಳವಿಕಾ ನೆರವಿಗೆ ಬಂದರು. ಸಾವರಿಸಿಕೊಂಡು ಎದ್ದ ಮಾಳವಿಕಾ ಮತದಾನ ಮಾಡಿ ವಾಪಸ್ಸಾದರು. ಅಲ್ಲದೇ ಮಾಧ್ಯಮದ ಜೊತೆ ಮಾತನಾಡಿದ ಮಾಳವಿಕಾ ಮತದಾನ ಪವಿತ್ರ ಕರ್ತವ್ಯ ಎಂದರು.