ಎಂ.ಬಿ.ಪಾಟೀಲ್​​ ಪತ್ನಿ ಭೇಟಿಯಾದ ಸಚಿವರ್ಯಾರು? ಭೇಟಿ ಹಿಂದಿನ ಉದ್ದೇಶವೇನು?

 

adಕಾಂಗ್ರೆಸ್ ಶಕ್ತಿಯಾಗಿರುವ ಎಂ.ಬಿ.ಪಾಟೀಲ್​ ಸಮ್ಮಿಶ್ರ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ. ಸಚಿವ ಸಂಪುಟದಲ್ಲಿ ತಮ್ಮನ್ನು ಕೈಬಿಟ್ಟಿರುವುದಕ್ಕೆ ಸಿಟ್ಟಿಗೆದ್ದಿರುವ ಎಂ.ಬಿ.ಪಾಟೀಲ್​ ಕಾಂಗ್ರೆಸ್​ ಹೈಕಮಾಂಡ್ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಇವರನ್ನು ಸುಧಾರಿಸಲು ಸಾಧ್ಯವಾಗಲೇ ಕಂಗಾಲಾಗಿರುವ ಕಾಂಗ್ರೆಸ್​ ಸಂಧಾನಕ್ಕೆ ಇವರ ಪತ್ನಿಯ ಮೊರೆ ಹೋಗಿದೆ.
ಶತಾಯ-ಗತಾಯ ಡಿಸಿಎಂ ಆಗಲೇ ಬೇಕೆಂದುಕೊಂಡಿರುವ ಎಂ.ಬಿ.ಪಾಟೀಲ್​, ಮನವೊಲಿಸಲು ಕಾಂಗ್ರೆಸ್​ ಇನ್ನಿಲ್ಲದ ಸರ್ಕಸ್​ ಆರಂಭಿಸಿದೆ. ಡಿಕೆಶಿ, ದಿನೇಶ್ ಗುಂಡೂರಾವ್​ ಎಲ್ಲರೂ ಮನವೊಲಿಸಿದರು ಎಂ.ಬಿ.ಪಾಟೀಲ್​ ಹಿಡಿದ ಪಟ್ಟು ಸಡಿಲಿಸಿಲ್ಲ. ಹೀಗಾಗಿ ಎಂ.ಬಿ.ಪಾಟೀಲ್ ಮನವೊಲಿಕೆಯ ಪ್ರಯತ್ನವಾಗಿ ಸಚಿವ ರಮೇಶ್ ಜಾರಕಿಹೊಳಿ ಎಂ.ಬಿ.ಪಾಟೀಲ್ ನಿವಾಸಕ್ಕೆ ತೆರಳಿ ಅವರ ಪತ್ನಿ ಆಶಾ ಪಾಟೀಲ್​ ಜೊತೆ ಮಾತುಕತೆ ನಡೆಸಿದ್ದಾರೆ.

ಎಂ.ಬಿ.ಪಾಟೀಲ್ ಪತ್ನಿ ಆಶಾ ಪಾಟೀಲ್​ ಜೊತೆ ಮಾತನಾಡಿದ ರಮೇಶ್ ಪಾಟೀಲ್, 2ನೇ ಸರದಿಯ ಸಂಪುಟ ವಿಸ್ತರಣೆ ವೇಳೆ ಪಾಟೀಲ್​ರಿಗೆ ಅವಕಾಶ ಸಿಗಲಿದೆ. ಹೀಗಾಗಿ ಪಾಟೀಲ್​​ರಿಗೆ ದುಡುಕಬೇಡಿ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಎಂ.ಬಿ.ಪಾಟೀಲ್​​ರ ಮನವೊಲಿಸುವುದು ಹೈಕಮಾಂಡ್​​ ಗೆ ಸವಾಲಾಗಿರೋದಂತು ನಿಜವಾಗಿದ್ದು, ಈ ಬೆಳವಣಿಗೆ ಯಾವ ಹಂತ ಪಡೆಯುತ್ತೆ ಕಾದು ನೋಡಬೇಕಿದೆ.