ಈ ಬಾರಿ ಬಿಗ್ ಬಾಸ್ ಮನೆಗೆ ಹೋಗೋರ‌್ಯಾರು ಗೊತ್ತಾ ? ಹೌದು ಸ್ವಾಮಿ !! ಸೀಸನ್ 6 ಶುರುವಾಗಿದೆ !!

ad

 

 

 

 

 

 

 

 

ಕಿರುತೆರೆಗೆ ಮತ್ತೆ ಬಿಗ್ ಬಾಸ್​ ಎಂಟ್ರಿಯಾಗ್ತಿದ್ದಾನೆ. ಬಿಗ್ ಬಾಸ್ ಸೀಸನ್ 6 ಸದ್ಯದಲ್ಲೇ ಶುರುವಾಗಲಿದೆ ಅನ್ನೋ ಮಾಹಿತಿ ಸೊಷಿಯಲ್ ಮಿಡಿಯಾದಲ್ಲಿ ಹರಿದಾಡ್ತಿದೆ.ಬಿಗ್ ಬಾಸ್ ಮತ್ತೆ ಶುರುವಾಗುತ್ತಿದೆ ಎಂಬ ಸುದ್ದಿಯಾಗುತ್ತಿದ್ದಂತೆ ಸ್ಪರ್ಧಿಗಳ ಹೆಸರೂ ಕೂಡ ಕೇಳಿ ಬರ್ತಿದೆ. ಈ ಬಾರಿಯ ಬಿಗ್​ಬಾಸ್​ ಮನೆಗೆ ಯಾರು ಎಂಟ್ರಿಯಾಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಪ್ರಮುಖವಾಗಿ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ, ನಿರ್ದೇಶಕ ನಾಗಶೇಖರ್, ಮಂಡ್ಯ ರಮೇಶ್, ಮುಂಗಾರು ಮಳೆ -2ರಲ್ಲಿ  ನಟಿಸಿದ್ದ ನೇಹಾ ಶೆಟ್ಟಿ, ಕಿರಿಕ್​ ಪಾರ್ಟಿಯಲ್ಲಿ ರಕ್ಷಿತ್ ಶೆಟ್ಟಿ ಗೆಳೆಯನಾಗಿ ನಟಿಸಿದ್ದ ಚಂದನ್ ಆಚಾರ್, ಪುಟ್ಟ ಗೌರಿ ಖ್ಯಾತಿಯ ರಂಜನಿ ರಾಘವನ್, ಸರಿಗಮಪ ಶೋ ಮೂಲಕ ಎಲ್ಲರ ಮನಗೆದ್ದ ಸಿಂಗರ್ ಚನ್ನಪ್ಪ ಹುದ್ದರ್ ಹಾಗೂ ನಟ ಅನಿರುದ್ ಹೆಸರು ಬಿಗ್​ಬಾಸ್​ ಸೀಸನ್ ಸಿಕ್ಸ್​ಗೆ ಕೇಳಿ ಬರ್ತಿದೆ.