ಗೌರಿ ಹತ್ಯೆ ಕಾರ್ಯರೂಪಕ್ಕೆ ತಂದವರ್ಯಾರು?- ಇನ್ನೆಷ್ಟು ಜನರ ಬಂಧನಕ್ಕೆ ಎಸ್​ಐಟಿ?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನ ಕಾರ್ಯರೂಪಕ್ಕೆ ತಂದಿದ್ದು ಮೂವರು ಎನ್ನುವ ಸ್ಪೋಟಕ ಮಾಹಿತಿ ಪರಶುರಾಮ್ ವಾಗ್ಮೋರೆ ಮೂಲಕ ಎಸ್ ಐ ಟಿ ಖಚಿತಪಡಿಸಿಕೊಂಡಿದೆ. ಸಿಂಧಗಿಯಲ್ಲಿ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆಯನ್ನ ತೀವ್ರ ವಿಚಾರಣೆಗೆ ಒಳಪಡಿಸಿರುವ ಎಸ್ ಐ ಟಿ ಈ ವಿಷಯ ಖಚಿತಪಡಿಸಿಕೊಂಡಿದೆ.
ಮೂವರು ಒಟ್ಟಾಗಿ ಕೃತ್ಯ ಎಸಗಿ ಪ್ರತ್ಯೇಕವಾಗಿ ಎಸ್ಕೇಪ್ ಆಗಿದ್ದರು.

ad


ಸೆಪ್ಟೆಂಬರ್ ೫ ರಂದು ಸುಂಕದಕಟ್ಟೆಯ ಮನೆಯೊಂದರಲ್ಲಿ‌ ಇದ್ದ ಮೂವರು ಕಾರ್ಯಾಚರಣೆಗೆ ಇಳಿದಿದ್ದರು. ಇದರಲ್ಲಿ ಪ್ರವೀಣ್ ಗೌರಿ ಬರುವ ಮಾಹಿತಿಯನ್ನ ಸಂಗ್ರಹಿಸಿ ವಾಗ್ಮೋರೆ ಹಾಗೂ ನಾಪತ್ತೆಯಾಗಿರುವ ನಿಹಾಲ್ ಗೆ ನೀಡುತ್ತಿದ್ದ. ಗೌರಿ ಕಚೇರಿಯಿಂದ ಹೊರಟು ಮನೆಗೆ ತಲಪುವ ಕೆಲ ಸಮಯದ ಮುಂಚೆ ನಿಹಾಲ್ ದಾದಾ ಹಾಗೂ ವಾಗ್ಮೋರೆ ಗೌರಿ ಮನೆ ಬಳಿ ಕಾದಿದ್ದರು. ಗೌರಿ ಬಂದ ಕೂಡಲೆ ವಾಗ್ಮೋರೆ ಗುಂಡು ಹಾರಿಸಿದ್ದ. ನಂತ್ರ ನಿಹಾಲ್ ಹಾಗೂ ವಾಗ್ಮೋರೆ ಇಬ್ಬರು ಅಲ್ಲಿಂದ ಎಸ್ಕೇಪ್ ಆಗಿ ಸುಂಕದ ಕಟ್ಟೆ ಮನೆ ಸೇರಿದ್ದರು. ಅಲ್ಲಿಂದ ಪ್ರವೀಣ್ ಬಂದ ಕೂಡಲೇ ಎಲ್ಲರೂ ಮನೆ ಖಾಲಿ ಮಾಡಿ ಪ್ರತ್ಯೇಕವಾಗಿ ಎಸ್ಕೇಪ್ ಆಗಿದ್ದರು.
ವಾಗ್ಮೋರೆ ಹೇಳಿಕೆ ಅಧರಿಸಿ ರೇಖಾ ಚಿತ್ರ..

ಇನ್ನೂ ಪಿಸ್ತೂಲ್ ನೀಡಿರುವ ವ್ಯಕ್ತಿಯ ಮಾಹಿತಿ ಗೊತ್ತಿಲ್ಲ ಎಂದ ಕಾರಣ ಎಸ್ ಐ ಟಿ ಆತನ ಹೇಳಿಕೆ ಅಧರಿಸಿ ರೇಖಾ ಚಿತ್ರ ತಯಾರಿಸಿದೆ. ಅಲ್ಲದೆ ನಿಹಾಲ್ ನ ಹುಡುಕಾಟವನ್ನು ತೀವ್ರಗೊಳಿಸಿರವ ಎಸ್ ಐ ಟಿ ಪ್ರಕರಣದಲ್ಲಿ ಒಟ್ಟು ಇನ್ನೂ ಮೂವರನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ