ಪ್ರಾಣಿರಕ್ಷಣೆಗೆ ಬಟ್ಟೆ ಮಾರ್ತಿರೋ ನಟ ಯಾರು ಗೊತ್ತಾ!

ಬಿಟೌನ್ ಬಾಸ್ ಅಕ್ಷಯ್ ಕುಮಾರ್ ಏನ್ ಮಾಡಿದ್ರು ಸುದ್ದಿಯಾಗತ್ತೆ..ಅದರಲ್ಲೂ ಕಿಲಾಡಿ ಅಕ್ಕಿ ಮಾಡೋ ಸಮಾಜಮುಖಿ ಕೆಲಸ ಎಲ್ಲರಿಗೆ ಪ್ರೇರಣೆ ನೀಡತ್ತೆ..ಇದೀಗ ಅಕ್ಷಯ್ ಕುಮಾರ್ ಆ ಒಂದು ಕಾರಣಕ್ಕೆ ತನ್ನ ಬಟ್ಟೆಯನ್ನೇ ಮಾರಾಟ ಮಾಡ್ತಿದ್ದಾರೆ. ಯಾರಿಗೋಷ್ಕರ ಈ ಬಟ್ಟೆ ಮಾರಾಟ ಅಂದ್ರಾ ಇಲ್ಲಿದೆ ಡಿಟೇಲ್ಸ್. ಅಕ್ಷಯ್ ಕುಮಾರ್ ಬರೀ ಸಿನಿಮಾ ಮಾತ್ರವಲ್ಲ ..ಸೋಶಿಯಲ್ ಅವೇರ್ನೆಸ್ ಮೂಡಿಸೋ ಸಾಕಷ್ಟು ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ತಿದ್ದಾರೆ.ಇತ್ತಿಚೆಗಷ್ಟೆ ದೇಶ ಕಾಯೋ ಸೈನಿಕರಿಗಾಗಿ ಆ್ಯಪ್ ಲಾಂಚ್ ಮಾಡೋ ಮೂಲಕ ಯೋಧರ ಕುಟುಂಬಕ್ಕೆ ನೆರವಾಗಿದ್ರು.ಇದೀಗ ಒಳ್ಳೆಯ ಕೆಲಸಕ್ಕಾಗಿ ತಾವು ಧರಿಸಿದ್ದ ಬಟ್ಟೆಯನ್ನೇ ಮಾರಾಟ ಮಾಡಲು ರೆಡಿಯಾಗಿದ್ದಾರೆ.

ಹೌದು… ಸಿನಿಮಾ ನಟ ನಟಿಯರು ಧರಿಸೋ ಆಭರಣಗಳಿಗೆ,ತೊಡೊ ಬಟ್ಟೆಗಳಿಗೆ ಸಖತ್ ಡಿಮ್ಯಾಂಡ್ ಇರತ್ತೆ.ಅದ್ರ ಬೆಲೆ ಎಷ್ಟೆ ಇರಲಿ ತಮ್ಮ ಮೆಚ್ಚಿನ ಸ್ಟಾರ್ ಗಳು ಹಾಕೋ ಬಟ್ಟೆಗಳನ್ನ ಕೊಂಡುಕೊಳ್ಳೋದು ಅಂದ್ರೆ ಅದೇನೋ ಅಭಿಮಾನಿಗಳಲ್ಲಿ ಖುಷಿ.ಈಗ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಾವು ತೊಟ್ಟಿದ್ದ ಬಟ್ಟೆಯನ್ನು ಹರಾಜಿಗಿಟ್ಟಿದ್ದಾರೆ. ಬಿಟೌನ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ರುಸ್ತುಂ ಚಿತ್ರದಲ್ಲಿ
ಧರಿಸಿದ್ದ ನೇವಿ ಆಫೀಸರ್ ಯೂನಿಫಾರಂನ್ನ ಅಕ್ಷಯ್ ಈಗ ಬಿಡ್ ಮಾಡಿದ್ದಾರೆ.

 

ಯೆಸ್..ಅಕ್ಕಿ ಯೂನಿಫಾರಂನ್ನ ಹರಾಜು ಹಾಕಲು ಮುಂದಾಗಿದ್ದಾರೆ.ಹರಾಜಿನಿಂದ ಬರೋ ದುಡ್ಡನ್ನ ಪ್ರಾಣಿಗಳ ರಕ್ಷಣೆಗಾಗಿ ಬಳಸಲಾಗುವುದಾಗಿ ಹೇಳಿದ್ದಾರೆ.ಹಾಗೆ ಅಕ್ಷಯ್ ಹರಾಜಿಗಿಟ್ಟ ಕೆಲವೇ ಗಂಟೆಗಳಲ್ಲಿ ಕೋಟಿ ಕೋಟಿ ಹಣ ಕೊಟ್ಟು ಬಟ್ಟೆಯನ್ನ ಖರೀದಿಸಲು ಅಕ್ಕಿ ಫ್ಯಾನ್ಸ್ ತುದಿಗಾಲಿನಲ್ಲಿ ಕಾಯ್ತಿದ್ದಾರೆ. 20ಸಾವಿರಕ್ಕೆ ನಿಗಧಿಯಾಗಿದ್ದ ಅಕ್ಷಯ್ ನೇವಿ ಯೂನಿಫಾರಂ ಸಧ್ಯ 2.5 ಕೋಟಿಯಷ್ಟು ಬಿಡ್ ಆಗಿದೆ.ಇನ್ನೂ ಮೇ20 ರವರೆಗೂ ನಡೆಯುವ ಈ ಬಿಡ್ ಪ್ರಕ್ರಿಯೆಯಿಂದ 5 ಕೋಟಿ ಬರಿವ ನಿರೀಕ್ಷೆಯಿದ್ದು ಸ್ವತಃ ಈ ಹಣವನ್ನ ಪ್ರಾಣಿಗಳ ರಕ್ಷಣೆಗಾಗಿ ನೀಡುವುದು ಎಂದು ಅಕ್ಷಯ್ ತಿಳಿಸಿದ್ದಾರೆ. ಬ್ಯಾಕ್ ಟುಬ್ಯಾಕ್ ಸಮಾಜಿಕ ಸಂದೇಶ ಹೊಂದಿರುವ ಸಿನಿಮಾ ಮಾಡುತ್ತಿರುವ ಅಕ್ಷಯ್ ಅದೇ ರೀತಿ ಸಮಾಜಮುಖಿ ಕೆಲಸ ಮಾಡ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬರಪೀಡಿತ ಪ್ರದೇಶದ ರೈತರ ನೆರವಿಗೆ 90 ಲಕ್ಷ ರೂ. ಧನ ಸಹಾಯ,ಅಭಿಮಾನಿಯೊಬ್ಬರ ತಂದೆಯ ಆಸ್ಪತ್ರೆ ಖರ್ಚಿಗಾಗಿ 25 ಲಕ್ಷ ರೂ ಸಹಾಯ, ಮಹಿಳೆಯರ ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್‌ ಸ್ಕೂಲ್ ಶುರು ಮಾಡೋ ಮೂಲಕ ಸಾಕಷ್ಟು ಜನಕ್ಕೆ ಮಾದರಿಯಾಗ್ತಿದ್ದಾರೆ.