ಸಬ್​ ಇನ್ಸಪೆಕ್ಟರ್​​​ ಇನ್ಸಪೆಕ್ಟರ್​ಗೇ ಅವಾಜ್​ ಹಾಕಿದ್ದು ಯಾಕೆ? ಅಲ್ಲಿ ಅಂತಹದ್ದೇನಾಯ್ತು?!

 

ad


ಮೇಲಾಧಿಕಾರಿಗಳ ದೌರ್ಜನ್ಯಕ್ಕೆ ಬೇಸತ್ತ ಸಬ್​ ಇನ್ಸಪೆಕ್ಟರ್​ ಒಬ್ಬ ಎಲ್ಲರ ಎದುರೇ ಪೊಲೀಸ್​ ಇನ್ಸಪೆಕ್ಟರ್​​ ಗೆ ಚಳಿ ಬಿಡಿಸಿ ಸಿನಿಮಿಯ ರೀತಿಯಲ್ಲಿ ಅವಾಜ್ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ವಿಶ್ವನಾಥಪುರದ ಸಬ್​ ಇನ್ಸಪೆಕ್ಟರ್​ ಹೀಗೆ ಮೇಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ದಿಟ್ಟ ಅಧಿಕಾರಿ.
ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಬ್​ ಇನ್ಸಪೆಕ್ಟರ್​ ಶ್ರೀನಿವಾಸ್ ದಾಳಿ ನಡೆಸಿದ್ದರು. ಈ ವೇಳೆ ಕಲ್ಲು ಸಾಗಿಸುತ್ತಿದ್ದ ಗ್ರಾಮದ ಪ್ರಭಾವಿ ವ್ಯಕ್ತಿ ಸಬ್​ ಇನ್ಸಪೆಕ್ಟರ್​ಗೆ ಅವಾಜ್​ ಹಾಕಿದ್ದು, ಪೊಲೀಸ್ ಇನ್ಸಪೆಕ್ಟರ್​​ಗೆ ಕರೆ ಮಾಡಿ ಸಬ್​ ಇನ್ಸಪೆಕ್ಟರ್​ ಮೇಲೆ ಒತ್ತಡ ಹೇರಲು ಸೂಚಿಸಿದ್ದಾರೆ.

 

ಇದರಿಂದ ಕೆರಳಿದ ಸಬ್​ ಇನ್ಸಪೆಕ್ಟರ್​​ ಶ್ರೀನಿವಾಸ್​ ಗ್ರಾಮಸ್ಥರು ಹಾಗೂ ಅಕ್ರಮವಾಗಿ ಕಲ್ಲು ಕೊಂಡೊಯ್ಯುತ್ತಿದ್ದವರ ಎದುರೇ ಇನ್ಸಪೆಕ್ಟರ್​ಗೆ ಸರಿಯಾಗಿ ಅವಾಜ್​ ಹಾಕಿದ್ದಾರೆ. ಅಷ್ಟೇ ಅಲ್ಲ ಸಖತ್ತಾಗಿಯೇ ಚಳಿ ಬಿಡಿಸಿದ್ದಾರೆ. ಇದರಿಂದ ಇನ್ಸಪೆಕ್ಟರ್​ ಸುಮ್ಮನಾಗಿದ್ರೆ ಇತ್ತ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದವರು ಕಂಗಾಲಾಗಿ ಹೋಗಿದ್ದಾರೆ ಎನ್ನಲಾಗಿದೆ.