ಕಡಲು ನೀರಿನ ಬಣ್ಣ ಕಪ್ಪಾಗಿದ್ದೇಕೆ? ಏನು ಹೇಳಿದ್ರು ವಿಜ್ಞಾನಿಗಳು?!

ಇಂದು ಕಡಲನಗರಿ ಕಾರವಾರದ ರವೀಂದ್ರನಾಥ ಕಡಲತೀರಕ್ಕೆ ವಾಯುವಿಹಾರಕ್ಕೆಂದು ಹೋದವರಿಗೆ ಶಾಕ್​ ಕಾದಿತ್ತು. ಯಾವಾಗ್ಲೂ ಅಬ್ಬರಿಸಿ ಹಾಲಗಡಲಂತೆ ಅಬ್ಬರಿಸುತ್ತಿದ್ದ ಕಡಲು ಇಂದು ಶಾಂತವಾಗಿತ್ತು. ಅಷ್ಟೇ ಅಲ್ಲ ಕಡಲಿನ ಬಣ್ಣ ಕೂಡ ಕಪ್ಪಾಗಿದ್ದು ಜನರ ಆತಂಕಕ್ಕೆ ಕಾರಣವಾಗಿತ್ತು, ಕಾರವಾರದ ರವೀಂದ್ರನಾಥ ಕಡಲತೀರದಿಂದ ಸುಮಾರು ಒಂದು ಕಿ.ಮಿ ನಷ್ಟು ದೂರದ ಸಮುದ್ರದ ಕಡಲತೀರದ ನೀರು ಕಪ್ಪು ಕಪ್ಪಾಗಿ ತೀರಾ ಕೊಳಕಾಗಿ ಕಂಡಿತ್ತು, ಮುಂಜಾನೆಯಿಂದಲೇ ಕಪ್ಪಾದ ಸಮುದ್ರದ ಕಡಲತೀರದ ನೀರನ್ನ ಕಂಡ ವಾಯುವಿಹಾರಿಗಳು ಆತಂಕಿತರಾದ್ರು, ಇನ್ನು ಒಂದೆಡೆ ಸಮುದ್ರದ ಅಲೆಗಳು ತನ್ನ ಜೊತೆಯಲ್ಲೆ ಕಸದರಾಶಿಯನ್ನ ತಂದು ತೀರಕ್ಕೆ ಎಸೆಯುತ್ತಿರುವದನ್ನ ನೋಡಿ ಇನ್ನಷ್ಟು ಹೌ ಹಾರಿ ಹೋಗಿದ್ದಾರೆ.

ಇನ್ನೂ ಕಳೆದ ವರ್ಷ ಸಮುದ್ರದ ನೀರು ಇದೆ ಮಳೆಗಾದಲ್ಲಿ ಹಸಿರಾಗಿ ಪರಿವರ್ತನೆಯಾಗಿತ್ತು ಈ ಸಂದರ್ಭದಲ್ಲಿ ಮೀನುಗಾರಿಕೆಯನ್ನ ಕೂಡಾ ಸ್ಥಗಿತಮಾಡಲಾಗಿತ್ತು, ಇಂದು ಕೂಡಾ ಸಮುದ್ರದ ನೀರು ಕಪ್ಪು ಕಪ್ಪಾಗಿ ಪರಿವರ್ತನೆಯಾಗಿ ನೀರು ಕೊಳಕಾಗಿದ್ರಿಂದ ಜನ್ರು ಸಾಮಾನ್ಯವಾಗಿಯೇ ಆತಂಕಿತರಾದ್ರು. ಆದ್ರೆ ಸಂಭಂದಪಟ್ಟ ಸ್ಥಳಿಯ ವಿಜ್ಞಾನಿಗಳು ಇದ್ರಿಂದ ಯ್ಯಾವುದೆ ಸಮಸ್ಯೆ ಇಲ್ಲ ಗ್ರಾಮೀಣ ಬಾಗದಲ್ಲಿ ಸುಟ್ಟ ಕಸದ ರಾಶಿ ನದಿಯ ಮೂಲಖ ಸಮುದ್ರ ಸೇರಿದ್ದು ಸಮುದ್ರ ಪುನಃ ತನ್ನ ಒಡಲೊಳಗಿಂದ ತೀರಕ್ಕೆ ಎಸೆದಿದೆ ಎಂಬ ಬಗ್ಗೆ ಸ್ಪಷ್ಟನೆ ಕೊಟ್ರು. ಒಟ್ಟಾರೆ ಇಂದಿನ ಕಾರವಾರದ ಅರಬ್ಬಿ ಸಮುದ್ರದ ತೀರದ ನೀರು ಕಪ್ಪಾಗಿ ಕಂಡು ಜನರಲ್ಲಿ ಆತಂಕವನ್ನು ಹುಟ್ಟಿಸಿತ್ತು, ತಿಳುವಳಿಕೆದಾರರು ಈ ಬಗ್ಗೆ ಸ್ಪಷ್ಟನೆ ಕೊಟ್ಟ ಬಳಿಕ ಆತಂಕಿತ ಜನರು ನಿಟ್ಟುಸಿರು ಬಿಡುವಂತಾಯಿತು.