ಮಾಜಿ ಸಿಎಂ ಸಿದ್ದು ಬದಾಮಿಯಲ್ಲಿ ನಡೆಸಿದ ಸಭೆಗೆ ಅವರೆಲ್ಲ ಯಾಕೆ ಬಂದಿದ್ದರು? ಇದು ಅಧಿಕಾರಿಗಳೇ ಕೇಳ್ತಿರೋ ಪ್ರಶ್ನೆ!

siddaranaiah

ಮಾಜಿ ಸಿಎಂ, ಬಾದಾಮಿ ಹಾಲಿ ಶಾಸಕ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ರಾ ? ಇಂತಹ ಚರ್ಚೆಗೆ ಗ್ರಾಸವಾಗಿದ್ದು ಮಾಜಿ ಸಿಎಂ ನಡೆಸಿದ ಚೊಚ್ಚಲ ಸಭೆ. ಆ ಸಭೆಯ ವಿಶೇಷತೆ ಏನು ಅನ್ನೋದನ್ನ ನೋಡೋದಾದ್ರೆ..
ಶಾಸಕರಾಗಿ ಪ್ರಥಮ ಬಾರಿಗೆ ಬಾದಾಮಿಗೆ ಬಂದಿದ್ದ ಮಾಜಿ ಸಿಎಂ ಸಿದ್ದು ಸೋಮವಾರ ಸಂಜೆ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಪ್ರಥಮ ಕೆಡಿಪಿ ಸಭೆ ನಡೆಸಿದ್ದಾರೆ. ಆದರೆ, ಆ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳೆಲ್ಲರನ್ನು ಕರೆಸಿದ್ದು, ಇದೀಗ ಆಡಳಿತ ಅಂಗಳದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

adsiddaranaiah

ಒಬ್ಬ ಶಾಸಕರು ನಡೆಸುವ ತಾಲೂಕು ಕೆಡಿಪಿ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಇರುತ್ತಾರೆ. ತೀರಾ ಅನಿವಾರ್ಯ ಇದ್ದಲ್ಲಿ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಬರಬಹುದೇನೋ?

ಆದರೆ, ಸೋಮವಾರ ಸಿದ್ದರಾಮಯ್ಯ ನಡೆಸಿರುವ ಸಭೆಗೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಜಿಪಂ ಸಿಇಒ ವಿಕಾಶ ಸುರಳಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದು, ಹೊಸ ಸಂಪ್ರದಾಯ ಎನ್ನುವ ಮಾತುಗಳು ಇದ್ದು, ಇದು ಅಧಿಕಾರ ವ್ಯಾಪ್ತಿ ಮೀರಿದ್ದು ಎಂದು ಹೇಳಲಾಗುತ್ತಿದೆ.

ಆದರೆ, ಸಿದ್ದರಾಮಯ್ಯ ನಡೆಸಿದ್ದು ಕೆಡಿಪಿ ಸಭೆ ಆಗಿರಲಿಲ್ಲ. ಅಧಿಕಾರಿಗಳ ಸಮಾಲೋಚನೆ ಸಭೆ ಆಗಿತ್ತು. ಅವರು ಕ್ಷೇತ್ರದ ಶಾಸಕರು ಇದ್ದಿದ್ದರಿಂದ ಅವರ ಆಹ್ವಾನದ ಮೇರಿಗೆ ಸಭೆಗೆ ಹೋಗಿದ್ದೇವು ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ, ಇದೇ ಸಂಪ್ರದಾಯವನ್ನು ಜಿಲ್ಲೆಯ ಉಳಿದ ಕ್ಷೇತ್ರಗಳ ಶಾಸಕರ ತಾಲೂಕು ಮಟ್ಟದಲ್ಲಿ ತೆಗೆದುಕೊಳ್ಳುವ ಸಭೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹೋಗುತ್ತಾರಾ ಎನ್ನುವ ಪ್ರಶ್ನೆಯೂ ಉದ್ಬವವಾಗಿದೆ.

siddaranaiahಸಿದ್ದರಾಮಯ್ಯ ಬಾದಾಮಿ ಶಾಸಕರು ಇದ್ದಾರೆ. ಜೊತೆಗೆ ಮಾಜಿ ಸಿಎಂ, ಮೊದಲ ಸಲ ಕ್ಷೇತ್ರಕ್ಕೆ ಬಂದಿದ್ದಾರೆ. ಅವರು ಕೆಡಿಪಿ ಸಭೆ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಅವರು ಕರೆದಿದ್ದರಿಂದ ಹಾಗೂ ಸಭೆಗೆ ಸ್ವತಃ ಜಿಲ್ಲಾಧಿಕಾರಿ, ಸಿಇಒ, ಎಸ್ಪಿ ಅವರೇ ಹೊರಟು ನಿಂತಾಗ ಇನ್ನೂಳಿದ ಇಲಾಖೆ ಅಧಿಕಾರಿಗಳು ಗೈರು ಆಗೋದು ಹೇಗೆ? ಹೀಗಾಗಿ ಹೋಗಿದ್ದೇವು. ಇದು ಸರಿಯೋ ತಪ್ಪು ಗೊತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರೆ ಕ್ಷೇತ್ರಗಳು ಶಾಸಕರು ಸಿದ್ದರಾಮಯ್ಯ ಅವರ ಸಭೆ ಮುಂದಿಟ್ಟುಕೊಂಡು ತಮ್ಮ ಸಭೆಗೂ ಜಿಲ್ಲಾ ಮಟ್ಟದ ಅಧಿಕಾರಿಗಳೇ ಬರಬೇಕು ಎಂದು ಪಟ್ಟುಹಿಡಿದರೆ ಮಾತ್ರ ಸಮಸ್ಯೆ ಸೃಷ್ಟಿಯಾಗೋದು ಖಚಿತ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಗೆ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಆದರೆ, ಶಾಸಕರು ನಡೆಸುವ ಸಭೆಗೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದು ಇದೇ ಮೊದಲು ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ಹೇಳಿದರು.