ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು ಯಾಕೆ? ಕೃಷ್ಣ ಭೈರೇಗೌಡ್ರು ಏನಂದ್ರು?

ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಅವರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾವನಾತ್ಮಕವಾಗಿ ಕಣ್ಣಿರು ಹಾಕಿದ್ದಾರೆ ಹೊರೆತು, ಕಾಂಗ್ರೆಸ್​ನಿಂದ ತೊಂದರೆಯಾಗುತ್ತಿದೆ ಅಂತಾ ಕಣ್ಣೀರು ಹಾಕಿಲ್ಲ ಅಂತಾ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಾ ಭೈರೇಗೌಡ ಪ್ರತಿಕ್ರಿಯಿಸಿದ್ದಾರೆ.

ad

 

ಕಲಬುರಗಿ ಜಿಲ್ಲೆಯಲ್ಲಿಂದ ಪ್ರವಾಸ ಕೈಗೊಂಡಿರುವ ಸಚಿವರು ಮಾಧ್ಯಮದವರ ಜೊತೆ ಮಾತನಾಡಿದ್ರು.  ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಜನರು ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡಿಲ್ಲ, ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ವಿಷಕಂಠನಂತೆ ಇದ್ದೇನೆ ಅಂತಾ ಅವರು ವೈಯುಕ್ತಿಕ ಮಾತನಾಡಿದ್ದಾರೆ ಹೊರತು, ನಮ್ಮಿಂದ ಯಾವುದೇ ತೊಂದರೆಯಾಗಿಲ್ಲ ಅಂತಾ ಖುದ್ದು ಎಚ್​ಡಿಕೆಯವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಮಾಧ್ಯಮಗಳು ವಿಪಕ್ಷಗಳ ಜೊತೆಗೂಡಿ ಉರಿಯೋ ಬೆಂಕಿಗೆ ತುಪ್ಪ ಸುರಿಸುತ್ತಿದದ್ದೀರಿ ಅಂತಾ ಮಾಧ್ಯಮಗಳ ವಿರುದ್ದ ಹರಿಹಾಯ್ದರು.

ಮಾಧ್ಯಮಗಳಿಗೆ ಹಿಟ್​ ಆಂಡ್ ರನ್ ಮಾಡೋದು ಅಭ್ಯಾಸವಾಗಿ ಬಿಟ್ಟಿದೆ, ಬಜೆಟ್​​ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬೋದು ಶುದ್ದ ಸುಳ್ಳು, ಹಳೆಯ ಸರ್ಕಾರದ ಬಜೆಟ್​ಗೆ ಪೂರಕವಾಗಿಯೇ ಸಿಎಂ ಅವರು ಬಜೆಟ್ ಮಂಡಿಸಿದ್ದಾರೆ. ನಾವು ಯಾವುದೇ ಕಾರಣಕ್ಕೂ ಯಾರಿಗೂ ಅನ್ಯಾಯವಾಗೋಕ್ಕೆ ಬಿಡುವುದಿಲ್ಲ, ನಾನು ಅನೇಕ ಬಾರಿ ಕಲಬುರಗಿ ಸೇರಿದಂತೆ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದೇನೆ, ಆದರೆ ಕೆಲಸ ಮಾಡಿದವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಅಂತಾ ತಿರುಗೇಟು ನೀಡಿದರು..  ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ಆಡಳಿತ ನೀಡುವ ಜವಾಬ್ದಾರಿ ನಮ್ಮ ಮೇಲಿದೆ..ವಿಪಕ್ಷದವರು ಕೇವಲ ಆರೋಪ ಮಾಡುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ..ಅವರಿಗೆ ನಾವು ಅಭಿವೃದ್ದಿ ಮೂಲಕ ಉತ್ತರ ನೀಡಲು ಮುಂದಾಗಿದ್ದೇವೆ ಅಂತಾ ಹೇಳಿದರು..