ಕೊನೆಗೂ ಸುಮಲತಾ ಅಂಬರೀಶ್​ಗೆ ಕೈ ಕೊಟ್ಟ ತಲೈವಾ! ಇಷ್ಟಕ್ಕೂ ಆಪ್ತಸ್ನೇಹಿತ ಪತ್ನಿ ಪರ ಪ್ರಚಾರಕ್ಕೆ ರಜನಿ ಯಾಕೆ ಬರ್ತಿಲ್ಲ ಗೊತ್ತಾ?!

ಮಂಡ್ಯ ಲೋಕಸಭೆ ಅಖಾಡಕ್ಕೆ ಧುಮುಕಿರೋ ಸುಮಲತಾ ಅಂಬರೀಶ್​ಗೆ ಸ್ಯಾಂಡಲ್​ವುಡ್ ಸಫೋರ್ಟ್​ ಕೈ ತಪ್ಪಿ ಹೋಗಿದೆ. ದಚ್ಚು ಯಶ್​ ಬಿಟ್ರೆ ಮತ್ಯಾವ ಸ್ಟಾರ್​ ಸುಮಲತಾರನ್ನ ಗೆಲ್ಲಿಸೋಕ್ಕೆ ಹೋಗ್ತಿಲ್ಲ. ಬಡವಾ ನೀ ಮಡ್ದಂಗಿರು ಅಂತ ಸುಮ್ಮನಾಗಿದ್ದಾರೆ. ಆದ್ರೆಸುಮಲತಾ ನಡೆಸುತ್ತಿರುವ ಸಮಾವೇಶ ಪ್ರಮುಖ ಆಕರ್ಷಣೆಯಾಗಿದ್ದ  ಸೂಪರ್​ ಸ್ಟಾರ್​ ರಜನಿಕಾಂತ್​ ಕೂಡ ಸುಮಲತಾ ಕೈಬಿಟ್ಟಿದ್ದು, ಆಪ್ತ ಸ್ನೇಹಿತನ ಪತ್ನಿ ಪರ ಚುನಾವಣಾ ಪ್ರಚಾರಕ್ಕೆ ಬರಲು ತಲೈವಾ ಹಿಂದೇಟು ಹಾಕಿ, ತಮ್ಮ ಭೇಟಿಯನ್ನೇ ರದ್ದುಗೊಳಿಸಿದ್ದಾರೆ ಎನ್ನಲಾಗ್ತಿದೆ.

ad


ಮಂಡ್ಯದಲ್ಲಿ ಲೋಕ ಬಹಿರಂಗ ಪ್ರಚಾರಕ್ಕೆ ಏಪ್ರಿಲ್ 16 ಕೊನೆಯ ದಿನ. ಹೀಗಾಗಿ ಸುಮಲತಾ ಅಂಬರೀಶ್​ ಕೊನೆಯ ದಿನ ಬೃಹತ್ ಸಮಾವೇಶ ಮಾಡೋದಕ್ಕೆ ನಿರ್ಧರಿಸಿದ್ದು, ಇದಕ್ಕೆ ಸೂಪರ್ ಸ್ಟಾರ್ ಹಾಗೂ ದಿ.ಅಂಬರೀಶ್​ ಅವರ ಪರಮಾಪ್ತ ಗೆಳೆಯ ರಜನಿಕಾಂತ್​ರನ್ನು ಆಹ್ವಾನಿಸಿದ್ದರು. ಮೊದಲು ಆಹ್ವಾನ ಒಪ್ಪಿಕೊಂಡು ಸುಮಲತಾ ಪರ ಪ್ರಚಾರ ಮಾಡಲು ಸಿದ್ಧವಾಗಿದ್ದ ರಜನಿಕಾಂತ್​, ಇತ್ತೀಚಿನ ಬೆಳವಣಿಗೆಗಳ ಬಳಿಕ ಮಂಡ್ಯಕ್ಕೆ ಬರಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇದನ್ನು ತಿಳಿದು ಸುಮಲತಾ ಕಂಗಾಲಾಗಿದ್ದು, ರಜನಿಕಾಂತ್​ರನ್ನು ಸಾಕಷ್ಟು ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರಂತೆ. ಆದರೆ ಯಾವುದಕ್ಕೂ ರಜನಿಕಾಂತ್​ ಬಗ್ಗದೇ ಯಾವುದೇ ಕಾರಣಕ್ಕು ಮಂಡ್ಯಕ್ಕೆ ಕಾಲಿಡೋಲ್ಲಾ ಅಂತ ಸುಮಕ್ಕನಿಗೆ ಹೇಳಿಬಿಟ್ಟಿದ್ದಾರಂತೆ. ಇದಕ್ಕೆ ಕಾರಣ ಮಂಡ್ಯದಲ್ಲಾದ ಐಟಿ ದಾಳಿ ಆರೋಪಗಳು.ಈ ಸುದ್ದಿ ರಜನಿಕಾಂತ್​ಗೂ ತಲುಪಿತ್ತು. ಹೀಗಾಗಿ ರಜನಿಕಾಂತ್​ ಸುಮಲತಾರ ಮೇಲೆ ಮುನಿಸಿಕೊಂಡು ಸುಮಕ್ಕನ ಪರ ಪ್ರಚಾರಕ್ಕೆ ಬರೋದಿಲ್ಲ ಅಂದಿದ್ದಾರೆ ಅಂತ ಹೇಳಲಾಗ್ತಿದೆ.

ಕೇವಲ ಒಂದು ಚುನಾವಣೆ ಪ್ರಚಾರಕ್ಕೆ ಬಂದು ಕರ್ನಾಟಕದ ರಾಜಕೀಯ ಮೇಲಾಟದಲ್ಲಿ ಸಿಕ್ಕಿಬಿದ್ದು, ಅನಾವಶ್ಯಕವಾಗಿ ಹಲವರ ವಿರೋಧ ಕಟ್ಟಿಕೊಳ್ಳಲು ರಜನಿಕಾಂತ್​​ ಸಿದ್ಧರಿಲ್ಲ. ಇದೇ ಕಾರಣಕ್ಕೆ ಯಾವುದೇ ಕಾರಣ ನೀಡದೇ ರಜನಿಕಾಂತ್​ ಪ್ರಚಾರದಿಂದ ಹೊರಗುಳಿದಿದ್ದಾರೆ. ಇತ್ತ ನಾಳೆ ರಜನಿಕಾಂತ್ ಬರದೇ ಇರೋದರಿಂದ  ಸುಮಲತಾ ಕಂಗಾಲಾಗಿದ್ದು, ಕೇವಲ ದರ್ಶನ ಮತ್ತು ಯಶ್​ ಇಬ್ಬರಿಂದಲೇ ಬೃಹತ ಸಮಾವೇಶದಲ್ಲಿ ಮತಯಾಚನೆ ಮಾಡೋ ಸ್ಥಿತಿ ಎದುರಾಗಿದೆ.