ಸಿನಿಮಾ ರಂಗಕ್ಕೆ ಬರ್ತಾರಾ ಮಾಜಿ ಸಚಿವರ ಪುತ್ರ!? ಗಣಿದಣಿ ಪುತ್ರ ಕೀರಿಟಿ ರೆಡ್ಡಿ ವಿದೇಶದಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ?!

ಗಾಲಿ ಜನಾರ್ಧನ್ ರೆಡ್ಡಿ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಚರ್ಚಿತ ಹೆಸರು. ಒಂದು ಕಾಲದಲ್ಲಿ ಕರ್ನಾಟಕವನ್ನು ನಡುಗಿಸಿದ್ದ ಈ ಜನಾರ್ಧನ್ ರೆಡ್ಡಿ ಕೋರ್ಟ್ ಕಟ್ಟಲೆಗಳ ನಡುವಲ್ಲಿ ಸಿಲುಕಿ ಹೋಗಿದ್ದಾರೆ. ಆದರೆ ಮುಂದೊಂದು ದಿನ ಕರ್ನಾಟಕದಲ್ಲಿ ಮತ್ತೆ ರೆಡ್ಡಿ ಹೆಸರು ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಕೇಳಿಬಂದರೇ ಅಚ್ಚರಿಯಿಲ್ಲ. ಇದಕ್ಕೆ ಕಾರಣ ಅವರ ಪುತ್ರ ಗಾಲಿ ಕೀರಿಟಿ ರೆಡ್ಡಿ.

ad

ಹೌದು ಮಾಜಿ ಸಚಿವ ಜನಾರ್ಧನ್ ರೆಡ್ಡಿ, ಪುತ್ರ ಗಾಲಿ ಕೀರಿಟಿ ರೆಡ್ಡಿ, ಕರ್ನಾಟಕದ ರಾಜಕೀಯ ಹಾಗೂ ಸಿನಿಮಾ ರಂಗ ಎರಡರಲ್ಲೂ ಮಿಂಚುವ ಮುನ್ಸೂಚನೆ ದೊರೆತಿದೆ. ರಾಜಕೀಯಕ್ಕೆ ಬರುವ ಆಸಕ್ತಿ ಹೊಂದಿರುವ ಕೀರಿಟಿ ರೆಡ್ಡಿ, ವಿದೇಶದಲ್ಲಿ ಪೊಲಿಟಿಕಲ್ ಸೈನ್ಸ್​​​ ಉನ್ನತ ಅಧ್ಯಯನದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಡ್ಯಾನ್ಸ್, ಫೈಟಿಂಗ್ ಸೇರಿದಂತೆ ನಟನೆಗೆ ಅಗತ್ಯವಾದ ಕೋಚಿಂಗ್ ಕೂಡ ಪಡೆಯುತ್ತಿದ್ದಾರೆ.
ವಿದ್ಯಾಭ್ಯಾಸ ಮುಗಿಸಿ ದೇಶಕ್ಕೆ ವಾಪಸ್ಸಾಗುತ್ತಿದ್ದಂತೆ ಜನಾರ್ಧನ್ ರೆಡ್ಡಿ ಪುತ್ರನಿಗಾಗಿ ಚಿತ್ರವೊಂದನ್ನು ನಿರ್ಮಿಸಲಿದ್ದಾರಂತೆ.

ರೆಡ್ಡಿ ಪುತ್ರನನ್ನು ತೆರೆ ಮೇಲೆ ತರಲು ಇಬ್ಬರು ಖ್ಯಾತ ನಿರ್ದೇಶಕರನ್ನು ರೆಡ್ಡಿ ಕುಟುಂಬ ಸಂಪರ್ಕಿಸಿದೆಯಂತೆ. ತೆಲುಗಿನ ಸ್ಟಾರ್ ಡೈರೆಕ್ಟರ್​ ಪೂರಿ ಜಗನ್ನಾಥ ಹಾಗೂ ವಿವಿ ವಿನಾಯಕ್​ ಹೆಸರು ಕೇಳಿಬಂದಿದೆ. ಏಕಕಾಲದಲ್ಲೇ ಎರಡು ಭಾಷೆಯಲ್ಲಿ ಚಿತ್ರ ಮೂಡಿಬರಲಿದೆಯಂತೆ. ಆದರೆ ಇದುವರೆಗೂ ಅಧಿಕೃತವಾಗಿ ಯಾರು ನಿರ್ದೇಶಿಸುತ್ತಾರೆ ಎಂಬುದು ನಿರ್ಧಾರವಾಗಿಲ್ಲ.

ಈ ಬಗ್ಗೆ ಸ್ವತಃ ರೆಡ್ಡಿ ಪುತ್ರ ಕೀರಿಟಿ ರೆಡ್ಡಿ ಮಾತನಾಡಿದ್ದಾರೆ. ನಿನ್ನೆ ಮತದಾನಕ್ಕಾಗಿ ಬಳ್ಳಾರಿಗೆ ಆಗಮಿಸಿದ್ದ ಕೀರಿಟಿ ರೆಡ್ಡಿ, ನಾನು ಆಸಕ್ತಿಯಿಂದ ಪೊಲಿಟಿಕಲ್​ ಸೈನ್ಸ್ ಓದುತ್ತಿದ್ದೇನೆ. ಆದರೆ ನನಗೆ ಸಿನಿಮಾ ನಟನೆಯಲ್ಲೂ ಆಸಕ್ತಿಯಿದ್ದು, ಅದು ನನ್ನ ಮೊದಲ ಆದ್ಯತೆ ಎಂದಿದ್ದಾರೆ. ಹೀಗಾಗಿ ಈಗಾಗಲೇ ಚಿತ್ರರಂಗದ ನಟ-ನಟಿಯರ ಮಕ್ಕಳಿಂದ ಎರಡನೇ ಜನರೇಶನ್​​ ಕಾಣುತ್ತಿರುವ ಸ್ಯಾಂಡಲವುಡ್​​​ಗೆ ರಾಜಕೀಯ ನಾಯಕರ ಮಕ್ಕಳು ಸೇರ್ಪಡೆ ಕಾಲವೂ ಸನ್ನಿಹಿತವಾದಂತಾಗಿದೆ.