ಮೇನಲ್ಲಿ ನಡೆಯಲಿದ್ಯಾ ಕಾಂಗ್ರೆಸ್​ ಯುವರಾಜನ ಮದುವೆ- ರಾಹುಲ್ ಕೈಹಿಡಿತಿರೋದು ಯಾರು ಗೊತ್ತಾ?!

ಒಂದೆಡೆ ಕರ್ನಾಟಕದ ಕುರುಕ್ಷೇತ್ರ ರಂಗೇರುತ್ತಿದ್ದರೇ, ಇತ್ತ ಕಾಂಗ್ರೆಸ್​ ಯುವರಾಜ ರಾಹುಲ್ ಗಾಂಧಿ ಮದುವೆಗೆ ಸಿದ್ಧತೆ ನಡಿತಿದ್ಯಾ ಅನ್ನೋ ಅನುಮಾನ ಮೂಡಿಸಿದೆ. ಹೌದು ಕರ್ನಾಟಕ ಕುರುಕ್ಷೇತ್ರ ಹೊತ್ತಲ್ಲೇ ರಾಹುಲ್​​ ಗಾಂಧಿ ಮ್ಯಾರೇಜ್​​​ ಸದ್ದು ಕೇಳಿಬಂದಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅದಿತಿ ಸಿಂಗ್​ ಮದುವೆ ನಡಿತಿದೆ ಅನ್ನೋ ಮಾತು ಕೇಳಿಬಂದಿದೆ.

ad


ರಾಯ್​ಬರೇಲಿ ಕಾಂಗ್ರೆಸ್ ಶಾಸಕಿಯಾಗಿರುವ ಅದಿತಿ ಸಿಂಗ್​ ಹಾಗೂ ರಾಹುಲ್ ಗಾಂಧಿ ಮದುವೆ ಮೇನಲ್ಲಿ ನಡೆಯುತ್ತೆ ಅನ್ನೋ ಮಾತು ಕೇಳಿಬಂದಿದೆ. ರಾಯ್​ ಬರೇಲಿಯಿಂದ ವಾಟ್ಸ್​ಆಪ್​ ನಲ್ಲಿ ಈ ರೀತಿಯ ಮೆಸೆಜ್​ನ ಹರಿದಾಟ ಆರಂಭವಾಗಿದ್ದು, ಇದೀಗ ಈ ಮೆಸೆಜ್​ ಎಲ್ಲೆಡೆ ವೈರಲ್​ ಆಗಿದ್ದು, ಜನರು ಕುತೂಹಲದಿಂದ ನೋಡತೊಡಗಿದ್ದಾರೆ.  ಇನ್ನು ಈ ಸುದ್ದಿ ಕೇಳಿಬರುತ್ತಿದ್ದಂತೆ, ಅದಿತಿ ಮಾಧ್ಯಮಗಳಿಗೆ ರಿಯಾಕ್ಷನ್​ ನೀಡಿದ್ದು, ನನಗೆ ರಾಹುಲ್ ಗಾಂಧಿ ಹಿರಿಯ ಸಹೋದರರಿದ್ದಂತೆ. ಯಾಕೆ ಈ ಸುದ್ದಿ ಹರಡಿತೋ ಗೊತ್ತಿಲ್ಲ. ಈ ವದಂತಿ ನನಗೆ ನೋವು ತಂದಿದೆ ಎಂದಿದ್ದಾರೆ.

 1 ಕಾಮೆಂಟ್

  1. ರಮ್ಯ ಆ ಯಮ್ಮನ್ನ ಮರ್ಡರ್ ಮಾಡಿಬುಡ್ತಾಳೆ ಅಷ್ಟೆ.

Comments are closed.