With eye on Karnataka elections, Amit Shah to meet religious leaders | 2018ರ ಚುನಾವಣೆಗೆ ಈಗಿನಿಂದ್ಲೇ ರಣತಂತ್ರ ರೂಪಿಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ನಾಳೆಯಿಂದ ಮೂರು ದಿನ ರಾಜ್ಯ ಪ್ರವಾಸ

0
10

2018ರ ಚುನಾವಣೆಗೆ ಈಗಿನಿಂದ್ಲೇ ರಣತಂತ್ರ ರೂಪಿಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ನಾಳೆಯಿಂದ ಮೂರು ದಿನ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಒಂದೆಡೆ ಲಿಂಗಾಯತ ಸ್ವತಂತ್ರ ಧರ್ಮ ಸಮರ, ಡಿಕೆಶಿ ಮೇಲಿನ ಐಟಿ ರೇಡ್​, ಗುಜರಾತ್​​ ರಾಜ್ಯಸಭೆ ಚುನಾವಣೆ ಮುಖಭಂಗ ಮತ್ತು ಪಕ್ಷದೊಳಗಿನ ಬಣ ಸಂಘರ್ಷ ಹಿನ್ನೆಲೆಯಲ್ಲಿ ಶಾ ಭೇಟಿ ಮಹತ್ವ ಪಡೆದುಕೊಂಡಿದೆ. ಅಮಿತ್​ ಶಾ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
=====
ಎಸ್​ಸಿ-ಎಸ್​ಟಿ, ಹಿಂದುಳಿದ ವರ್ಗ ಸೇರಿದಂತೆ ಪಕ್ಷದ ವಿವಿಧ ಪ್ರಕೋಷ್ಠಗಳ ಜತೆ ನಾಳೆ ಸುದಿರ್ಘ ಸಭೆ ನಡೆಸಲಿರುವ ಅಮಿತ್​ ಶಾ ಆಗಸ್ಟ್​ 13ರ ರಂದು ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆರ್ಟ್​ ಆಫ್​​ ಲೀವಿಂಗ್​​ನ ಶ್ರೀ ರವಿಶಂಕರ್​​ ಗುರೂಜಿ ಸೇರಿದಂತೆ ಕೆಲವು ಮಠಾಧೀಶರನ್ನೂ ಭೇಟಿಯಾಗಲಿದ್ದಾರೆ. ಇದೂ ಕೂಡ ಶಾ ಚುನಾವಣಾ ರಣತಂತ್ರದ ಒಂದು ಭಾಗ ಎನ್ನಲಾಗ್ತಿದೆ.
======

LEAVE A REPLY

Please enter your comment!
Please enter your name here