ಯಲಹಂಕ ಆರ್​ಟಿಓದಲ್ಲಿ ಲಂಚವೋ ಲಂಚ!- ಕೇಳಿದ್ದಕ್ಕೆ ಬೆದರಿಸುತ್ತಾರೆ ಆರ್​ಟಿಓ!

ಬೃಹತ್ ಬೆಂಗಳೂರು ಮಹಾನಗರದ ಅಂಚಿನಲ್ಲಿರುವ ಯಲಹಂಕ ಆರ್​ಟಿಓ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಕಾಸಿಲ್ಲದಿದ್ರೆ ಇಲ್ಲಿ ಯಾವುದೇ ಕೆಲ್ಸ ನಡೆಯುವುದಿಲ್ಲ. ಜೊತೆಗೆ ಸಾರ್ವಜನಿಕರು ನೇರವಾಗಿ ಈ ಕಚೇರಿಯಲ್ಲಿ ಯಾವುದೇ ಕೆಲಸ ಮಾಡಿಸಿಕೊಳ್ಳಲು ಆಗೋದೆ ಇಲ್ಲ. ಕಚೇರಿ ತುಂಬೆಲ್ಲಾ ಬ್ರೋಕರ್​ಗಳದ್ದೇ ಹವಾ. ಬ್ರೋಕರ್​ಗಳ ಮುಖಾಂತರವಲ್ಲದೆ ನೇರವಾಗಿ ಕಚೇರಿಗೆ ಹೋದ್ರು ಯಾವುದೇ ಕೆಲಸ ನಡೆಯೊಲ್ಲ ಯಾವುದೇ ಫೈಲ್​ ಸಹ ಮೂವ್​ ಆಗೊಲ್ಲ. ಒಂದು ವೇಳೆ ಫೈಲ್​ ಮೂವ್​ ಆಗಬೇಕಾದರೆ ಅಲ್ಲಿರುವ ಭ್ರಷ್ಟ ಅಧಿಕಾರಿಗಳ ಕೈ ಬೆಚ್ಚಗೆ ಮಾಡಲೇ ಬೇಕು. ಇಲ್ಲಿನ ಸಹಾಯಕ ಪ್ರಾದೇಶಿಕ ಅಧಿಕಾರಿ ಎನ್​.ಎಸ್​.ಪ್ರಕಾಶ್​​ಗೆ ಲಕ್ಷ ಲಕ್ಷ ಲಂಚ ಸೇರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಪೂರಕವಾಗುವಂತೆ ಎಆರ್ಟಿಓ ಪಿಎ ನಡೆಸಿರುವ ಡೀಲ್​ ಮಾತುಕತೆ ಸಾಕ್ಷಿಯಾಗಿ ನಿಂತಿದೆ. ಯಾವುದೇ ಫೈಲ್​ಗೆ ಸಹಿ ಹಾಕಬೇಕಾದ್ರು ಈತನಿಗೆ ಸೇರಬೇಕಾದದ್ದು ಸೇರಲೇಬೇಕಂತೆ. ಸರಿಯಾದ ಪಾಲು ಸೇರದಿದ್ರೆ ಸೈನ್​ ಬೀಳುವುದೇ ಇಲ್ವಂತೆ. ಈ ಕುರಿತ ಡೀಲ್​ ಮಾತುಕತೆಯ ಎಕ್ಸಕ್ಲ್ಯೂಸಿವ್​ ವಿಡಿಯೋ ಬಿಟಿವಿ ನ್ಯೂಸ್​ ಗೆ ಲಭ್ಯವಾಗಿದೆ. ಕೇವಲ ಇಷ್ಟು ಮಾತ್ರವಲ್ಲ ಈ ಯಲಹಂಕ ಆರ್​ಟಿಓ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಗೆದಷ್ಟು ಬಯಲಾಗುತ್ತಿದೆ. ಡಿಎಲ್​(ಡ್ರೈವಿಂಗ್​ ಲೈಸೆನ್ಸ್​) ಮಾಡಿಸಲು ಎಸ್​ಎಸ್​ಎಲ್​ಸಿ ಮಾರ್ಕ್ಸ್ ಕಾರ್ಡ್​ ಇಲ್ಲವಾದ್ರು ಪರವಾಗಿಲ್ಲ.

ಕಚೇರಿ ಬಳಿಯಿರುವ ಅಂಗಡಿಗಳಲ್ಲಿ ಮಾರ್ಕ್ಸ್​ ಕಾರ್ಡ್​ ಮಾಡಿಕೊಡುವ ಡೀಲ್​ ನಡೆಯುತ್ತಿದೆ. ಮಾರ್ಕ್ಸ್​ ಕಾರ್ಡ್​ ಮಾಡಿಸುವ ಡೀಲ್​ ಕುರಿತು ಮಾತುಕತೆ ಎಕ್ಸ್​ಕ್ಲ್ಯೂಸಿವ್​ ವಿಡಿಯೋ ಬಿಟಿವಿ ಬಳಿಯಿದೆ. ಇಷ್ಟು ಮಾತ್ರವಲ್ಲ ಡ್ರೈವಿಂಗ್​ ಸ್ಕೂಲ್​ಗಳು ಸಹ ಇಲ್ಲಿ ದೊಡ್ಡ ದಂದೆ ನಡೆಸುತ್ತಿವೆ. ಒಂದೇ ಹೆಸರಿನಲ್ಲಿ ಹಲವಾರು ಡ್ರೈವಿಂಗ್​ ಶಾಲೆಗಳನ್ನು ತೆರೆದಿದ್ದು, ಸಾರಿಗೆ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಷ್ಟೆಲ್ಲಾ ನಡೆದ್ರು ಪಾಪ ಎಆರ್​ಟಿಓ ಪ್ರಕಾಶ್​ ಸಾಹೆಬ್ರೆಗೆ ಏನು ಗೊತ್ತೇ ಇಲ್ವಂತೆ. ಇದನ್ನು ಕೇಳಲು ಮಾಧ್ಯಮಗಳು ಹೋದ್ರೆ ಅವರನ್ನೇ ವಿಡಿಯೋ ಮಾಡಿ ಬೆದರಿಸುತ್ತಿದ್ದಾರೆ.

 

ಪ್ರತ್ಯುತ್ತರ ನೀಡಿ

Please enter your comment!
Please enter your name here