ಮಹಿಳೆ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ! ಮೈಜುಮ್ಮೆನಿಸುವ ಹಲ್ಲೆ ವಿಡಿಯೋ ವೈರಲ್​!!

ಬೆಂಗಳೂರಿನಲ್ಲಿ ಇತ್ತೀಚಿಗೆ ಕ್ಷುಲಕ ಕಾರಣಕ್ಕೂ ಜನ  ಲಾಂಗ್​​, ಮಚ್ಚು ಹಿಡಿದು ಬಡಿದಾಡುವುದು ಕಾಮನ್​ ಆಗಿದೆ. ಆದರೆ ಮದವೇರಿದ ಯುವಕರ ಗುಂಪೊಂದು  ಜನನಿಬಿಡ ಸ್ಥಳದಲ್ಲೇ  ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಈ ಕ್ರೂರ ದೃಶ್ಯಾವಳಿಗಳು ಎಲ್ಲೆಡೆ ವೈರಲ್ ಆಗಿದೆ.

ad

ಹೌದು ನೆಲಮಂಗಲ-ಬೆಂಗಳೂರು ನಡುವಿನ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳ ಮೇಲೆ  ಮನಸೋ ಇಚ್ಛೆ ಹಲ್ಲೆ ನಡೆದಿದೆ. ಹಲ್ಲೆ ದೃಶ್ಯ ಸಿಸಿಟಿವಿ ಹಾಗೂ ಸ್ಥಳೀಯರ ಮೊಬೈಲ್​​ಗಳಲ್ಲಿ ಸೆರೆಯಾಗಿದೆ.

ಇನ್ನು ಕೊಲೆ ವಿಚಾರವೊಂದಕ್ಕೆ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ ಒಂದು ಕಡೆಯವರನ್ನು ಮತ್ತೊಂದು ಕಡೆಯವರು ಮಚ್ಚು, ಲಾಂಗ್​​​ ಹಿಡಿದು ಅಟ್ಟಾಡಿಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮಾದನಾಯಕನಹಳ್ಳಿ ಪೊಲೀಸರು  ಹಾಡಹಗಲೇ ನಡೆದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ  ದಾಖಲಿಸಿಕೊಂಡು ಚನ್ನಪ್ಪ ಎಂಬುವನನ್ನು ಬಂಧಿಸಿದ್ದಾರೆ.

ಬೆಂಗಳೂರು ಹೊರವಲಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ

ಬೆಂಗಳೂರು ಹೊರವಲಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಏಪ್ರಿಲ್ 21, 2019