ಎತ್ತುಗಳಿಲ್ಲದೆ ತಾನೇ ನೊಗಕ್ಕೆ ಹೆಗಲು ಕೊಟ್ಟ ನಾರಿ.

ರೆಂಟಿಗೆ ಹೆಗಲು ಕೊಟ್ಟ ರೈತ ಮಹಿಳೆ…!!

ad


ಚಿಕ್ಕೋಡಿಯಲ್ಲಿ ಅನ್ನದಾತನ ಗೋಳು… ಜಾನವಾರು ಹಾಗೂ ಟ್ರ್ಯಾಕ್ಟರ್ ಮಾಡೋ ಕೇಲಸ ಮಹಿಳೆಯಿಂದ…ಎಷ್ಟೇ ಕಷ್ಟವಾದ್ರು ಉಳಿಮೆ ಮಾಡ್ತಾಯಿರೋ ಬಡ ರೈತ ಕುಟುಂಬ.. ಕಸ ತಗೆಯಲಿಕ್ಕೆ ಹಣ ವಿಲ್ಲದೇ ಪತ್ನಿಯಿಂದ ರೆಂಟೆ ಹೊಡೆಯುತ್ತಿರುವ ರೈತ… ಈ ರೈತ ಕುಟುಂಬದ ಕಷ್ಟ ಹೇಳತೀರದು… ಹೌದು ಎತ್ತುಗಳು ಮಾಡುವ ಕೆಲಸವನ್ನು ಒರ್ವ ರೈತ ಮಹಿಳೆ ಮಾಡ್ತಾ ಇರೋದನ್ನು ನೋಡಿದ್ರೆ ಎಂತ‌ ಕಟುಕ ಹೃದಯ ಸಹ ಚುರುಕ್ ಅನ್ನುತ್ತೆ.

  

ಅಂದಹಾಗೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ನಿವಾಸಿಯಾದ ಮಹಾದೇವ ಶಂಕರ ಸಾಳುಂಕೆ ಎನ್ನುವ ರೈತ, ತನ್ನ ಸಹೋದರ ಹಾಗೂ ಇನ್ನೋರ್ವ ಕೂಲಿ ಕಾರ್ಮಿಕನನ್ನು ಬಳಸಿಕೊಂಡು ಬಿತ್ತನೆ ಕಾರ್ಯ ಮಾಡ್ತಾಯಿದ್ದಾನೆ. ಈ ಭಾಗದಲ್ಲಿ ಭೀಕರ ಬರಗಾಲದಿಂದ ಆವರಿಸಿದ್ದು ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದು  , ಇಲ್ಲಿಯವರಗೆ ಅಷ್ಟಕ್ಕಷ್ಟೆ ಮಳೆಯಾಗಿದೆ. ಇನ್ನೂ ಈ ರೈತ ಇದ್ದ ಎರಡು ಎಕರೆ ಜಮೀನುನಲ್ಲಿ ಸಾಲಶೂಲ ಮಾಡಿ ಬಿತ್ತನೆ ಬೀಜ ತಂದು ಒಂದು ಏಕರೆ ಭೂಮಿಯಲ್ಲಿ ಮಾತ್ರ ಸೊಯಾಬಿನ ಬೆಳೆ ಬೆಳೆದಿದ್ದಾನೆ.

ಇನ್ನೋಂದು ಎಕರೆ ಭೂಮಿಯನ್ನು ಹಣ ವಿಲ್ಲದೇ ಉಳುಮೆ ಮಾಡದೇ ಹಾಗೆ ಬಿಟ್ಟಿದ್ದಾರೆ. ಇನ್ನೂ ಈಗಿದ್ದ ಬೆಳೆಯಲ್ಲಿ ಕಸ ತೆಗೆಯಲಿಕ್ಕೆ ಕಾರ್ಮಿಕರಿಗೆ ಹಾಗೂ ರೆಂಟಿ ಹೊಡೆಯಲು ಎತ್ತುಗಳಿಗೆ ಬಾಡಿಗೆ ನೀಡಲು ಹಣ ವಿಲ್ಲದ ರೈತ ಮಹಾದೇವ ನ ಪತ್ನಿ ತನ್ನ ಪತಿಯ ಜೊತೆ ಕೂಡಿ ರೆಂಟಿಗೆ ಹೆಗಲು ಕೊಟ್ಟು ಕೃಷಿ ಚಟುವಟಿಕೆಯನ್ನು ಮಾಡುತ್ತಿದ್ದಾಳೆ. ಈ ರೈತರ ಗೋಳು ಕೇಳಲು ಸರ್ಕಾರವಾಗಲಿ ಅಥವಾ ಸಂಘ ಸಂಸ್ಥೆಗಳು ಮುಂದೆ ಬಂದ್ರೆ ರೈತರ ಬದುಕು ಹಸನಾಗುತ್ತೆ