ಜೀವದೊಂದಿಗೆ ಮಹಿಳೆಯ ಸೆಣೆಸಾಟ.. ಮೈ ಜುಮ್ ಅನ್ನುವಂತಿದೆ ಈ ಗ್ರಾಮಸ್ಥರ ನಡಿಗೆ

ಕುಗ್ರಾಮದಲ್ಲಿ ಜೀವನ‌‌ ನಡೆಸೋದು ಸುಲಭದ‌ ಮಾತಲ್ಲ.‌ಇಂತಹ ಗ್ರಾಮದಲ್ಲಿ ಬದುಕಬೇಕಂದ್ರೆ ಜೀವವನ್ನ ಕೈಯಲ್ಲಿ ಹಿಡಿದೆ ಬದುಕು ಸಾಗಿಸಬೇಕು. ಇದು ಉತ್ತರಕನ್ನಡ ಜಿಲ್ಲೆಯ ತೀರಾ ಹಿಂದೂಳಿದ ತಾಲೂಕಾಗಿರುವ ಗಂಗೋಡ ಗ್ರಾಮದ ಜನರ ಕಥೆ. ಈ ಗ್ರಾಮದಲ್ಲಿ ವಾಸಿಸೋ ಜನ ಮಳೆಗಾಲದಲ್ಲಿ ಪ್ರತಿನಿತ್ಯ ತಮ್ಮ ಪ್ರಾಣವನ್ನ ಕೈಯಲ್ಲಿ ಹಿಡಕೊಂಡು ಬದುಕಬೇಕಿದೆ.

ad


ಈ ಗ್ರಾಮದಲ್ಲಿ ಕೇವಲ ಎರಡು ಮನೆಗಳಿಗೆ ಇವರು ಪ್ರತಿದಿನ ತಮ್ಮ ವ್ಯವಹಾರ ನಡೆಸಬೇಕು ಅಂದ್ರೆ ಈ ಹಳ್ಳದಾಟಿಯೆ ಹೋಗಬೇಕು. ಆದ್ರೆ ಈ ಹಳ್ಳಕ್ಕೆ ಒಂದು ಸೇತುವೆ ಸಹ ಇಲ್ಲ.. ಹಳ್ಳಕ್ಕೆ ಅಡ್ಡಲಾಗಿ ಬಿದ್ದಿರೋ ಮರದ ಮೇಲೆ‌ ದಾಟಬೇಕಿದೆ.

ಗಂಗೋಡ ಗ್ರಾಮವನ್ನ ಹೊಸದಾಗಿ ರಚನೆ ಮಾಡಲಾಗಿದೆ. ಒಂದು ಗ್ರಾಮ ಹೊಸದಾಗಿ ರಚನೆ ಆಗಬೇಕಾದ್ರೆ ಅಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ಒಂದಗಿಸಬೇಕು. ಆದ್ರೆ ಈ ಗ್ರಾಮ ಹೊಸದಾಗಿ ರಚೆನೆ ಆಗಿರೋದು ಬಿಟ್ಟರೆ. ಗ್ರಾಮಕ್ಕೆ ಬೇಕಾಗಿರುವ ಯಾವುದೆ ಮೂಲಭೂತ ಸೌಕರ್ಯ ಇನ್ನೂ ಕಲ್ಪಿಸದೆ ಇರೋದು ದುರಂತ ವೇ ಸರಿ.

ಇಲ್ಲೊಬ್ಬಳು ಮಹಿಳೆ ತನ್ನ‌ ಮಗನಿಗೆ ಶಾಲೆಗೆ ಬಿಟ್ಟು ಬರೋದಕ್ಕೆ ಸಾಹಸ ಮಾಡಿ ಹಳ್ಳದಾಟಿ ಹೋಗುವ ದೃಶ್ಯವನ್ನ ನೋಡಿದ್ರೆ ಒಮ್ಮೆ ಮೈ ಜುಮ್ ಅಂತಿದೆ‌.

ಒಂದುವೇಳೆ ಆ ಮಹಿಳೆ ಹಳ್ಳದಾಟತ್ತಾ ಇರೋವಾಗ ಕಾಲು ಜಾರಿದ್ರೆ ಶಿವನ ಪಾದವೆ ಗತಿ. ಇಷ್ಟಾದ್ರೂ ಅಲ್ಲಿನ ಸ್ಥಳೀಯ ಆಡಳಿತ ಮಾತ್ರ ಕಣ್ಣಿದ್ದು ಕುರುಡಾಗಿದೆ ಅಂತಾನೆ ಹೇಳಬಹುದು.