ಟೀಂ ಇಂಡಿಯಾ ಇನ್ನು ಕೇಸರಿಮಯ! ಹೊಸ ಜರ್ಸಿಯಲ್ಲಿ ಮಿಂಚುತ್ತಿರುವ ಇಂಡಿಯನ್ ಬಾಯ್ಸ್​!!

ನಾಳೆ ನಡೆಯಲಿರುವ ವಿಶ್ವಕಪ್​ ಪಂದ್ಯದಲ್ಲಿ  ಇಂಗ್ಲೆಂಡ್​ ಎದುರಿಸಲಿರುವ  ಭಾರತ ನೀಲಿ ಜೆರ್ಸಿ ಬದಲು ಕಿತ್ತಳೆ ಬಣ್ಣದ ಜರ್ಸಿ ತೊಟ್ಟು ಆಡಲಿದ್ದು, ಈ ವಿಚಾರ ಇದೀಗ ಚರ್ಚೆಗೀಡಾಗಿದೆ.

ad

ಕಿತ್ತಳೆ ವರ್ಣದ ಹೊಸ ಜರ್ಸಿ ತೊಟ್ಟ ಟೀಂ ಇಂಡಿಯಾ ಆಟಗಾರರು ಪೋಸ್​ ಕೊಟ್ಟಿರುವ ಫೋಟೋಗಳನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು ಇದೀಗಾ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಬಹುಷಃ ಕ್ರಿಕೆಟ್​ ಆರಂಭಗೊಂಡಾಗಿನಿಂದಲೂ ಭಾರತದ ಆಟಗಾರರು ನೀಲಿ ಜರ್ಸಿಯಲ್ಲೇ ಕಾಣಿಸಿಕೊಂಡಿದ್ದು, ಇದೀಗ ಮೊದಲ ಬಾರಿಗೆ ಕೇಸರಿ ಜರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

ಇನ್ನು ಭಾರತದಲ್ಲಿ ಕೇಸರಿ ಬಣ್ಣವನ್ನು ಸದಾಕಾಲ ಬಿಜೆಪಿ ಬಣ್ಣವೆಂದು ಬಣ್ಣಿಸಲಾಗುತ್ತದೆ. ಇದೇ ಕಾರಣಕ್ಕೆ ನಾಳೆ ಭಾರತ ತಂಡ ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯಲಿರೋದನ್ನು ಸೋಷಿಯಲ್ ಮೀಡಿಯಾದಲ್ಲಿ  ವಿಭಿನ್ನವಾಗಿ ಟೀಕಿಸಲಾಗುತ್ತಿದ್ದು, ದೇಶ ಎಲ್ಲೆಡೆ ಕೇಸರಿಮಯವಾಗುತ್ತಿದೆ ಎಂಬ ಟೀಕೆಗಳು ಆರಂಭವಾಗಿದೆ.