ಲಾರಿ,ಕಾರು,ಟೆಂಪೋ ಓಡಿಸ್ತಾಳೆ ೭ ರ ಪೋರಿ- ಮೈಸೂರಿನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ರಿಫಾ!!

ಏಳು ವರ್ಷದ ಬಾಲಕಿ ಅಬ್ಬಬ್ಬಾ ಎಂದರೇ ತನ್ನ ಪುಟಾಣಿ ಸೈಕಲ್​​ ಓಡಿಸಬಹುದು. ಆದರೇ ಟ್ರಕ್​,ಕಾರು.ಮಿನಿಟೆಂಪೋ ಓಡಿಸ್ತಾಳೆ ಅಂದ್ರೇ ಏನ್ ಸಾರ್ ಜೋಕ್ ಮಾಡ್ತೀರಾ ಅಂತಿರಾ? ಖಂಡಿತಾ ಇಲ್ಲ. ಇಲ್ಲೊಬ್ಬಳು 7 ವರ್ಷದ ಬಾಲಕಿ ಬರೋಬ್ಬರಿ 14 ವಾಹನ ಚಲಾಯಿಸಿ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಈಕೆಯ ಸಾಹಸಕ್ಕೆ ಎಲ್ಲರೂ ಬೆಕ್ಕಸಬೆರಗಾಗಿದ್ದಾರೆ.

adಮೈಸೂರಿನ ತಾಜುದ್ದೀನ ಹಾಗೂ ಬೀಬಿ ಫಾತಿಮಾ ಪುತ್ರ 7 ವರ್ಷದ ರೀಫಾ ಹೀಗೆ ವಿಶ್ವದಾಖಲೆ ಸೇರಿದ ಬಾಲೆ. ಹೌದು ನಿನ್ನೆ ಮೈಸೂರಿನಲ್ಲಿ ಗೋಲ್ಡನ್ ಬುಕ್ ಆಫ್​​ ವರ್ಲ್ಡ್​​ ರೆಕಾರ್ಡ್​್ನ ಅಧಿಕಾರಿಗಳ ಎದುರು ರೀಫಾ ಲೀಲಾಜಾಲವಾಗಿ ಭಾರಿ ಗಾತ್ರದ ಲಾರಿ,ಕಾರು,ಮಿನಿ ಟೆಂಪೋ,ಎಕ್ಸ್​ ಯೂವಿ ಕಾರುಗಳು ಸೇರಿದಂತೆ 14 ಬಗೆಯ ವಾಹನಗಳನ್ನು ಸಲೀಸಾಗಿ ಹಾಗೂ ಸುರಕ್ಷಿತವಾಗಿ ಚಾಲನೆ ಮಾಡಿ ಎಲ್ಲರನ್ನು ಮೂಕವಿಸ್ಮಿತರಾಗುವಂತೆ ಮಾಡಿದಳು. ಈಕೆಯ ಸಾಹಸಕ್ಕೆ ಸ್ವತಃ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಕೂಡಾ ಸಾಕ್ಷಿಯಾದರು.

ಈಕೆ ವಾಹನ ಚಾಲನೆಯ ಚಾಕಚಕ್ಯತೆ ಹಾಗೂ ಪ್ರಾವಿಣ್ಯತೆ ವೀಕ್ಷಿಸಿದ ಬುಕ್ ಆಫ್​ ವರ್ಲ್ಡ್ ರೆಕಾರ್ಡ್​​ನ ಮ್ಯಾನೇಜರ್ ಸಂತೋಷ್​​ ಅಗರ್​ವಾಲ್​ ರಿಫಾ ಹೆಸರು ವಿಶ್ವದಾಖಲೆಗೆ ಸೇರ್ಪಡೆಯಾಗಿರುವುದನ್ನು ಪ್ರಕಟಪಡಿಸಿದರು.
ರೀಫಾಳಿಗೆ ಒಂದು ವರ್ಷವಿದ್ದಾಗಲೇ ಆಕೆಯ ತಂದೆ ತಾಜುದ್ದೀನ ಆಕೆಗೆ ಬೈಕ್​ ಚಲಾಯಿಸುವುದನ್ನು ಕಲಿಸಿದ್ದರಂತೆ. ಮೂರು ವರ್ಷವಿದ್ದಾಗಲೇ ಹಲವಾರು ಕಾರುಗಳನ್ನು ಓಡಿಸಿ ಸಾಹಸ ಮೆರೆದಿದ್ದರು. ಇದೀಗ 14 ಬಗೆಯ ವಾಹನ ಓಡಿಸಿದ್ದು, ಆಕೆಯ ಮೈನವಿರೇಳಿಸುವ ಸಾಹಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಪುಟ್ಟ ಬಾಲಕಿಯಾಗಿದ್ದರೂ ಅಂಜದೇ-ಅಳುಕದೇ ಬೃಹತ ಲಾರಿ ಓಡಿಸಿದ ರೀಫಾಗೆ ಮುಂದೇ ಪೈಲಟ್​ ಆಗಬೇಕೆಂಬ ಕನಸಿದೆಯಂತೆ. ಆಕೆ ಬದುಕು ಇನ್ನಷ್ಟು ಸಾಹಸ ಹಾಗೂ ದಾಖಲೆಗಳಿಗೆ ಸಾಕ್ಷಿಯಾಗಲಿ ಅನ್ನೋದು ನಮ್ಮ ಆಶಯ.