ಮೈಸೂರು ಅರಮನೆಗೆ ಉತ್ತರಾಧಿಕಾರಿ ಆಗಮನ !! ಗಂಡು ಮಗುವಿಗೆ ಜನ್ಮ ನೀಡಿದ ಯುವರಾಣಿ !!

Thrisikadevi gives birth to a Baby Boy in Bengaluru.
Thrisikadevi gives birth to a Baby Boy in Bengaluru.

ಮೈಸೂರು ಮಹಾರಾಣಿ ತ್ರಿಷಿಕಾಗೆ ಮುದ್ದಾದ ಗಂಡು ಮಗು.  “ಯದು”ಕುಲ ತಿಲಕ.

ಮೈಸೂರು ಅರಮನೆಗೆ ತಟ್ಟಿದ್ದ ಎರಡು ದಶಕಗಳ ಶಾಪಕ್ಕೆ ಮುಕ್ತಿ ದೊರೆತಿದೆ. ಮೈಸೂರು ಯುವರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದಶಕಗಳ ನಂತರ ಮೈಸೂರು ಅರಮನೆಯಲ್ಲಿ ತೊಟ್ಟಿಲು ತೂಗಿದೆ.

ಮೊನ್ನೆಯಷ್ಟೇ ಬೆಂಗಳೂರಿನ ಕ್ಲೌಡ್​ ನೈನ್​ ಆಸ್ಪತ್ರೆಗೆ ಗರ್ಭಿಣಿ ತ್ರಿಷಿಕಾ ಕುಮಾರಿಯನ್ನ ಅಡ್ಮಿಟ್​ ಮಾಡಿದ್ರು. ಶ್ರೀರಾಮನ ಜನ್ಮ ನಕ್ಷತ್ರದಲ್ಲಿಯೇ ಯದುತಿಲಕನ ಜನನವಾಗಿದೆ. ಪುನರ್ವಸು ನಕ್ಷತ್ರದಲ್ಲಿ ಯದುಕುಲ ತಿಲಕನ ಜನನವಾಗಿದ್ದು, ಮೈಸೂರು ರಾಜವಂಶಸ್ತರಲ್ಲಿ ಸಂಭ್ರಮ ಮನೆ ಮಾಡಿದೆ.

65 ವರ್ಷಗಳ ನಂತ್ರ ಮೈಸೂರು ಅರಮನೆಯಲ್ಲಿ ಸಂತಾನ ಸಂಭ್ರಮ ಮನೆ ಮಾಡಿದೆ. ಶಿಶು ಜನನಾನಂತರದ ಕಾರ್ಯಗಳನ್ನ ಪೂರ್ಣಗೊಳಿಸಲು ರಾಜ ಮಾತೆ ಸೂಚನೆ ನೀಡಿದ್ದಾರೆ. ಜ್ಯೋತಿಷಿಗಳು ಹಾಗೂ ಅರಮನೆಯ ಜೋಯಿಸರು ಸಭೆ ಸೇರಿ ಮಗುವಿನ‌ ಜಾತಕ ಸಿದ್ಧಪಡಿಸಲು ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.

2015 ರಲ್ಲಿ ರಾಜಮಾತೆ ಪ್ರಮೋದಾ ದೇವಿ ಅವರು ಯದುವೀರ್ ಅವರನ್ನು ದತ್ತು ಸ್ವೀಕರಿಸಿ ಮೈಸೂರು ಸಂಸ್ಥಾನದ ರಾಜವಂಶದ ಉತ್ತರಾಧಿಕಾರಿಯನ್ನಾಗಿಸಿದ್ದರು. 2016 ರ ಜೂನ್ 27 ರಂದು ಯದುವೀರ್ ರಾಜಸ್ಥಾನ ರಾಜ ಕುಟುಂಬದ ತ್ರಿಷಿಕಾ ಕುಮಾರಿ ಅವರನ್ನು ವಿವಾಹವಾಗಿದ್ದರು.

 

ಪ್ರತ್ಯುತ್ತರ ನೀಡಿ

Please enter your comment!
Please enter your name here