ಉತ್ತರಕನ್ನಡ ಜಿಲ್ಲೆಯ ಈ ಜಾತ್ರೆಯ ವಿಶೇಷವೇನು ಗೊತ್ತಾ? ಯಾವುದು ಆ ಜಾತ್ರೆ ? ನೀವೇ ನೋಡಿ

ಮೂರು ವರ್ಷಕ್ಕೊಮ್ಮೆ ನಡೆಯುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನೆಲೆಸಿರುವ ಶಕ್ತಿ ದೇವೆತೆ ದೇವಮ್ಮ ದುರ್ಗಮ್ಮ ದೇವಿಯ ಜಾತ್ರೆ ಅತಿ ವಿಜೃಂಭಣೆಯಿಂದ ಪ್ರಾರಂಭವಾಗಿದೆ. ೯ ದಿನಗಳ ಕಾಲ ನಡೆಯಿಲಿರುವ ಜಾತ್ರೆಗೆ ನಿನ್ನೆ ವಿದ್ಯುಕ್ತ ಚಾಲನೆ ಸಿಕ್ಕಿತು, ಲಕ್ಷಾಂತರ ಭಕ್ತ ಸಮೂಹದ ಮದ್ಯೆ ಅಲಾಂಕರ ಭೂಷಿತೆ ದೇವಿಯನ್ನ ಜಾತ್ರಾ ಗದ್ದುಗೆಗೆ ಕರೆತರಲಾಯಿತು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.

ಹೌದು ಕರ್ನಾಟಕದ ಪ್ರಸಿದ್ದ ದೇವಿ ಜಾತ್ರೆಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ದೇವಮ್ಮದುರ್ಗಮ್ಮ ದೇವಿಯ ಜಾತ್ರೆಗೆ ಇಂದು ವಿದ್ಯುಕ್ತ ಚಾಲನೆ ಸಿಕ್ಕಿತು. ಮೂರು ವರ್ಷಕ್ಕೊಮ್ಮೆ ೯ ದಿನಗಳ ಕಾಲ ನಡೆಯುವ ಜಾತ್ರೆ ಇದಾಗಿದ್ದು ಇಂದು ದೇವಮ್ಮ ದುರ್ಗಮ್ಮ ದೇವಿಯನ್ನ ಮೂಲ ದೇವಾಲಯದಿಂದ ಜಾತ್ರಾ ಗದ್ದುಗೆಗೆ ಅತಿ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಹೊತ್ತು ತಂದು ಭಕ್ತಿ ಪರಾಕಾಷ್ಠೆ  ಮೆರೆದ್ರು. ಮೆರವಣಿಗೆಯಲ್ಲಿ ದೇವಿಯ ಹೊನ್ನಾಟಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದ್ರು. ನೂರಾರು ವರ್ಷದ ಇತಿಹಾಸ ಹೊಂದಿರುವ ಈ ದೇವಿ ಜಾತ್ರೆಗೆ ರಾಜ್ಯ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ಕೃತಾರ್ಥರಾದ್ರು.

ಇನ್ನೂ ಸಂಜೆಹೊತ್ತಲ್ಲಿ ದೇವಮ್ಮ ದುರ್ಗಮ್ಮ ದೇವಿಯರನ್ನ ಮೂಲ ದೇವಾಲಯದಿಂದ ಹೊರ ತರುವಾಗ ಭಕ್ತರ ಜೈಕಾರ ಘೋಷಣೆ ಮುಗಿಲುಮುಟ್ಟಿತ್ತು, ಬೇರೆ ಜಾತ್ರೆಗೆ ಹೋಲಿಸಿದ್ರೆ ದೇವರನ್ನ ರಥದ ಮೇಲೋ ಅಥವಾ ಪಲ್ಲಕ್ಕಿಯ ಮೇಲೊ ಮೆರವಣಿಗೆ ಮಾಡೋದು ಸರ್ವೆ ಸಾಮಾನ್ಯ, ಆದ್ರೆ ಈ ದೇವಿಯ ಜಾತ್ರೆಯಲ್ಲಿ ದೇವಿಯರನ್ನ ಭಕ್ತರೆ ಶಿರದ ಮೇಲೆ ಹೊತ್ತು ತರುವುದು ವಿಶೇಷ. ಈ ಹಿನ್ನಲೆಯಲ್ಲಿ ಈ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಣ್ಣುಮಿಟುಗುಡಿಸದೆ ರಥಬೀದಿಯ ಇಕ್ಕೆಲಗಳಲ್ಲೂ ಕೂಡಾ ಕಾದು ನಿಲ್ತಾರೆ.
ರಾಜ್ಯದ ಪ್ರಮುಖ ಜಾತ್ರೆಯಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದೇವಮ್ಮ ದುರ್ಗಮ್ಮ ದೇವಿಯ ಜಾತ್ರೆ ಸೂಪರ್. ಲಕ್ಷಾಂತರ ಭಕ್ತ ಸಮೂಹವನ್ನ ಇಂದು ಯಲ್ಲಾಪೂರ ದೇವಿ ಜಾತ್ರೆಯಲ್ಲಿ ನೋಡಸಿಕ್ಕಿದ್ದು ವಿಶೇಷ.