ಕೆಜಿಎಫ್​​ನಲ್ಲಿ ಯಶ್​​ಗೆ ಸಿದ್ಧವಾಗಿರೋ ಬೈಕ್​ ಹೇಗಿದೆ ಗೊತ್ತಾ?

Yash's New Bike Prepared For KGF Film.

ರಾಕಿಂಗ್ ಸ್ಟಾರ್​ ಕೆಜಿಎಫ್​​ ಸಿನಿಮಾ ಮಾಡಿರೋ ಮೋಡಿ ಅಂತಿಂತದ್ದಲ್ಲ..

ಕೆಜಿಎಫ್​​​​​​​ನ ಒಂದು ಪೋಸ್ಟರ್​ ರಿಲೀಸ್ ಆದ್ರೂ ಕ್ಷಣಾರ್ಧದಲ್ಲಿ ಯಶ್​ ಫ್ಯಾನ್ಸ್​​​​​​​​​​​​​​ಗಳನ್ನ ಅದೇ ಗುಂಗಲ್ಲೇ ತೇಲುವಂತೆ ಮಾಡುತ್ತೆ. ಇದೀಗ ಕೆಜಿಎಫ್​​ನಲ್ಲಿ ರಾಕಿಂಗ್ ಸ್ಟಾರ್ ಬಳಸಿದ ವಿಶೇಷ ಬೈಕ್​ ಬಗ್ಗೆ ಎಲ್ಲೆಡೆ ದೊಡ್ಡ ಚರ್ಚೆ ಆಗ್ತಿದೆ.. ಅದು ಯಾಕೆ ಅಂದ್ರಾ ಈ ಸ್ಟೋರಿ ನೋಡಿ. ಕೆಜಿಎಫ್​.. ಕನ್ನಡ ಚಿತ್ರರಂಗದ ಹೆಸರನ್ನ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿರೋ ಸಿನಿಮಾ.. ಬರೀ ಸ್ಯಾಂಡಲ್​​​ವುಡ್​​​ ಮಾತ್ರ ಅಲ್ಲ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲೂ ದೊಡ್ಡ ಸೌಂಡ್​ ಮಾಡ್ತಿರೋ ಚಿತ್ರ.. ರಾಕಿಂಗ್ ಸ್ಟಾರ್​ ಯಶ್​​ ಸಿನಿ ಬದುಕಿನ ಅದ್ಯಾಯದಲ್ಲಿ ಹೊಸ ಇತಿಹಾಸ ಬರೆಯಬಲ್ಲ ಚಿತ್ರ ಕೆಜಿಎಫ್.

ಕೆಜಿಎಫ್​ ಫೋಸ್ಟರ್​, ಮೇಕಿಂಗ್​​, ಯಶ್ ಸ್ಟೈಲ್​, ಟೀಸರ್​​​ ರಾಕಿಂಗ್ ಹುಡುಗರನ್ನ ಅದೇ ಗುಂಗಲ್ಲಿ ತೇಲುವಂತೆ ಮಾಡಿತ್ತು. ಇದೀಗ ಯಶ್​​ ಕೆಜಿಎಫ್​ನಲ್ಲಿ ಬಳಸಿದ ಬೈಕ್​​​​​ ಬಗ್ಗೆ ​ಟಾಕ್ ಕ್ರಿಯೇಟ್ ಆಗಿದೆ. ಅದಕ್ಕೆ ಕಾರಣ ಯಶ್ ಸಾವರಿ ಮಾಡಿರೋ ಕಣ್ಣು ಕುಕ್ಕುವಂಥ ಆ ಬೈಕ್​ ಮೇಲೆ ಎಲ್ಲರ ಕಣ್ಣು ಬಿದ್ದಿರೋದು. ಎಲ್ಲರೂ ಯಶ್ ಕೆಜಿಎಫ್​​ನಲ್ಲಿ ಬಳಸಿರೋ ಬೈಕ್​ ಬಗ್ಗೆ ಮಾತಾಡಿಕೊಳ್ತಿದ್ದಾರೆ. ಯಾಕಂದ್ರೆ ಆ ಬೈಕ್​​ ಅಷ್ಟೊಂದು ಅಟ್ರಾಕ್ಟೀವ್ ಆಗಿದೆ. ಯಶ್​ ಆ ಬೈಕ್​ ಮೇಲೆ ಕೂತಿರೋ ಸ್ಟೈಲ್​​, ​​ ಬೈಕ್​​ನ ಲುಕ್​​​​ ಎಲ್ಲವೂ ಬೈಕ್​​​​ ಪ್ರಿಯರಿಗೆ ಹುಚ್ಚು ಹಿಡಿಸಿದೆ.

ಸಿನಿಮಾಗಳಲ್ಲಿ ನಟರು ಬಳಸೋ ಬೈಕ್, ಕಾರುಗಳು ಪ್ರೇಕ್ಷಕರಿಗೆ ಬೇಗ ಇಷ್ಟ ಆಗುತ್ತವೆ. ಅದೇ ತರಹ ತಮ್ಮ ಬೈಕ್ ಕಾರುಗಳನ್ನ ಆಲ್ಟ್ರೇಷನ್​​ ಮಾಡಿಸಿಕೊಳ್ತಾರೆ. ಇದೀಗ ಕೆಜಿಎಫ್​​ನಲ್ಲೂ ಆ ತರಹ ಟ್ರೆಂಡ್ ಸೆಟ್​ ಮಾಡೋ ಬೈಕ್ಅನ್ನ ಯಶ್​ ಯ್ಯೂಸ್​​​​ ಮಾಡಿದ್ದಾರೆ. ಆದ್ರೆ ಈ ಬೈಕ್ ಸೃಷ್ಟಿಯಾಗಿದ್ದು ಹೇಗೆ ಅಂತ ಕೆದಕಿದ್ರೆ ಇದರ ಹಿಂದೆ ರೋಚಕ ಕಥೆ ಇದೆ. ಇವತ್ತು ಎಲ್ಲರೂ ಮಾತಾಡ್ತಿರೋ ಕೆಜಿಎಫ್​​ನಲ್ಲಿ ಯಶ್​ ಯ್ಯೂಸ್​ ಮಾಡಿರೋ ಬೈಕ್ ಸೃಷ್ಟಿಯಾಗಿದ್ದರ ಹಿಂದೆ ಇಂಟ್ರೆಸ್ಟಿಂಗ್ ಸ್ಟೋರಿ ಇದೆ.

ಆ ಬೈಕ್​ ಸೃಷ್ಟಿಯಾದ ಮೇಕಿಂಗ್ ಕೂಡ ಬಿಟಿವಿಗೆ ಸಿಕ್ಕಿದೆ.. ಯಶ್​ ಬಳಸಿರೋ ಈ ಬೈಕ್​​​ ನೋಡಿದ್ರೆ ಯಾವ್ದೋ ಫಾರಿನ್ ಕಂಪೆನಿ ಬೈಕ್ ಅನ್ನಿಸುತ್ತೆ. ಆದ್ರೆ ಇದು ರಾಯಲ್ ಎನ್ಫೀಲ್ಡ್​​ ಮೋಟರ್​ ಸೈಕಲ್… ಈ ಬೈಕ್​ ಅನ್ನ ಆಲ್ಟ್ರೇಷನ್ ಮಾಡಲಾಗಿದೆ. ಕೆಜಿಎಫ್​ ನಿರ್ದೇಶಕ ಪ್ರಶಾಂತ್ ನೀಲ್​ ಕೆಜಿಎಫ್​​​​​ಗಾಗಿ ಒಂದು ಬೈಕ್ ಬೇಕು ಅನ್ನೋ ಪ್ಲಾನ್ ಮಾಡಿದ್ರು. ಈ ವಿಚಾರವ ಕೆಜಿಎಫ್​ ಸಿನಿಮಾಟೋಗ್ರಫರ್​ ಭುವನ್​ ಗೌಡ ಬಳಿ ಚರ್ಚೆ ಮಾಡಿದ್ದಾರೆ. ಆಗ್ಲೆ ಸೃಷ್ಟಿಯಾಗಿದ್ದು ರಾಕಿ ಬೈಕ್​.. ಸ್ಟೈಲೀಸ್ ಆಗಿದ್ದ ರಾಯಲ್ ಎನ್​ಫೀಲ್ಡ್​ ಟ್ರ್ಯಾಂಪ್ 500 ಸಿಸಿ ಬೈಕ್ ಅನ್ನ ಖರೀದಿ ಮಾಡಿದ ಕೆಜಿಎಫ್ ಟೀಂ ಬೈಕ್​​ನ ಇಂಜಿನ್​​ ಒಂದನ್ನ ಬಿಟ್ಟು ಮತ್ತೆಲ್ಲವನ್ನ ಆಲ್ಟ್ರೇಷನ್ ಮಾಡಿಸಿದೆ.

ಯಶ್ ಅಭಿಮಾನಿಗಳನ್ನ ಕಣ್ಣು ಕುಕ್ಕುವಂತಿರೋ ಈ ಬೈಕ್​ ರೆಡಿಮಾಡೋಕೆ ಬರೋಬ್ಬರಿ ಒಂದು ತಿಂಗಳು ಟೈಮ್​ ಹಿಡಿದಿದೆ. ಅಷ್ಟೆ ಅಲ್ ಬೈಕ್​​ಗೆ ಎರಡು ಲಕ್ಷ ಆದ್ರೆ ಅದನ್ನ ಆಲ್ಟ್ರೇಷನ್​​ಗೆ ಮೂರು ಲಕ್ಷ ಖರ್ಚು ಮಾಡಲಾಗಿದೆ. ಯಾಕಂದ್ರೆ ರಾಯಲ್​ ಎನ್​​ಫೀಲ್ಡ್​​​ನ ಬೈಕ್​ನ ಇಂಜಿನ್ ಒಂದನ್ನ ಬಿಟ್ರೆ ಮತ್ತೆಲ್ಲವನ್ನ ಹೊಸದಾಗಿ ಮಾಡಿಸಲಾಗಿದೆ. ಬೈಕ್ ರೆಡಿ ಆದ ಬಳಿಕ ಭುವನ್ ಈ ಬೈಕ್​​​ನ ಕೆಜಿಎಫ್ ಚಿತ್ರೀಕರಣದ ಸೆಟ್​​ಗೆ ತೆಗೆದುಕೊಂಡು ಹೋಗಿದ್ದಾರೆ. ಆಗ ಈ ಬೈಕ್​​ ನೋಡಿ ಯಶ್ ಥ್ರಿಲ್​ ಆಗಿದ್ದಾರೆ. ಬೈಕ್ ಡಿಸೈನ್​​ ಅನ್ನ ಯಶ್​ ಕೊಂಡಾಡಿದ್ದು, ಈ ಬೈಕ್​​ ಮೇಲೆ ರಾಕಿಂಗ್ ಸ್ಟಾರ್​​ಗೆ ಲವ್​ ಆಗಿದೆಯಂತೆ. ಈಗ ಈ ಬೈಕ್​​ ರಾಕಿಂಗ್ ಸ್ಟಾರ್​ ಫ್ಯಾನ್ಸ್​ ಬಳಗದಲ್ಲಿ ದೊಡ್ಡ ಕ್ರೇಜ್​ ಸೃಷ್ಟಿಸಿದ್ದು, ಎಲ್ಲರೂ ಈ ಬೈಕ್​ ಕೊಂಡುಕೊಳ್ಳೋಕೆ ಕಾಯ್ತಿದ್ದಾರೆ.