ಮಹಿಳಾ ಆಯೋಗ ಎದುರು ಮಲ್ಲಮ್ಮ ಪ್ರತ್ಯಕ್ಷ- ಕಾಂಗ್ರೆಸ್​ನತ್ತ ಓಲವು ತೋರಿದ ಯೋಗೇಶ್ ಪತ್ನಿ

ಮಹತ್ವದ ಬೆಳವಣಿಗೆಯೊಂದರಲ್ಲಿ ಕೊಲೆಯಾದ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಪತ್ನಿ ಮಲ್ಲವ್ವ ರಾಜ್ಯ ಮಹಿಳಾ ಆಯೋಗದ ಎದುರು ಪ್ರತ್ಯಕ್ಷವಾಗಿದ್ದಾರೆ. ಕಳೆದ ಎರಡು ದಿನಗಳಿಂದ ಯೋಗೀಶ್ ಗೌಡ್​​ ಪತ್ನಿ ಮಲ್ಲಮ್ಮರನ್ನು ಕಾಂಗ್ರೆಸ್ ಮುಖಂಡರು ಕಿಡ್ನಾಪ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಮಹಿಳಾ ಅಯೋಗದ ಎದುರು ಪತ್ತೆಯಾಗಿರುವ ಮಲ್ಲಮ್ಮ ತಮ್ಮನ್ನು ಯಾರು ಕಿಡ್ನಾಪ್ ಮಾಡಿಲ್ಲ. ನಾನು ಸ್ವಇಚ್ಛೆಯಿಂದ ತೆರಳಿದ್ದೇನೆ ಎನ್ನುವ ಮೂಲಕ ಕಾಂಗ್ರೆಸ್​ ಸೇರ್ಪಡೆಯಾಗುವ ಮುನ್ಸೂಚನೆ ನೀಡಿದ್ದಾರೆ.

ad


ಮಹಿಳಾ ಆಯೋಗಕ್ಕೆ ತಮ್ಮ ಹೇಳಿಕೆ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಮಲ್ಲಮ್ಮ, ನನ್ನನ್ನು ಯಾರು ಅಪಹರಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ತಂದೆ ಸಮಾನ. ಸಿಎಂ ಭೇಟಿ ತೆರಳುತ್ತೇನೆ. ಈ ವೇಳೆ ಅವರು ಪಕ್ಷಕ್ಕೆ ಆಹ್ವಾನಿಸಿದರೇ ಕಾಂಗ್ರೆಸ್​ ಸೇರುತ್ತೇನೆ ಎಂದಿದ್ದಾರೆ. ಈ ಹಿಂದೆ ಯೋಗೀಶ್ ಗೌಡ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಹೆಸರು ಕೇಳಿಬಂದಿತ್ತು. ಅಲ್ಲದೇ ಬಿಜೆಪಿ ನಾಯಕರು ಕೂಡ ಯೋಗೇಶ್​ ಕೊಲೆ ಕೇಸ್​ನಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡವಿದೆ ಎಂದು ಅರೋಪಿಸಿದ್ದರು. ಉಭಯ ಸದನಗಳಲ್ಲೂ ಈ ಪ್ರಕರಣ ಭಾರಿ ಕೋಲಾಹಲವನ್ನೇ ಉಂಟು ಮಾಡಿತ್ತು. ಇದೀಗ ಮಲ್ಲಮ್ಮ ಕಾಂಗ್ರೆಸ್​ ಸೇರ್ಪಡೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇನ್ನು ಸ್ವಇಚ್ಛೆಯಿಂದ ಪ್ರಕರಣ ದಾಖಲಿಸಿಕೊಂಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಮಾತನಾಡಿದ್ದು, ಯೋಗೇಶ್ ಗೌಡ ಹತ್ಯೆ ಬಳಿಕ ಅವರ ಕುಟುಂಬದವರಿಗೆ ಯಾವುದೇ ಸಮಸ್ಯೆ ಇಲ್ಲ.ಕೆಲವು ಕಿಡಿಗೇಡಿಗಳು ಮಲ್ಲಮ್ಮ ವಿರುದ್ದ ಅಪಪ್ರಚಾರ ಮಾಡಿದ್ದಾರೆ. ಮಲ್ಲಮ್ಮ ಅನಾರೋಗ್ಯ ನಿಮಿತ್ತ ಶಿರಸಿಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದರು. ಮಲ್ಲಮ್ಮರ ಕುಟುಂಬದವರೇ ಅಪಪ್ರಚಾರ ಮಾಡಿದ್ದಾರೆ.

ಮಲ್ಲಮ್ಮ ವಿರುದ್ಧ ಮಾಡಿರುವ ಅಪಪ್ರಚಾರ ಅಕ್ಷಮ್ಯ. ಕಾಂಗ್ರೆಸ್ ನಾಯಕರು ಕಿಡ್ನಾಪ್ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಮಲ್ಲಮ್ಮ ಮಾವ ಗುರುನಾಥ ಗೌಡರೇ ಅಪಪ್ರಚಾರ ಮಾಡಿದ್ದಾರೆ. ದೂರಿನನ್ವಯ ಆರೋಪಿಗಳ ವಿರುದ್ದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಆದರೇ‌‌ ಮಲ್ಲಮ್ಮ‌ ಅವರ ಈ ನಿರ್ಧಾರ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅವರ ಕುಟುಂಬಸ್ಥರು ಹಾಗೂ ಯೋಗೀಶ್ ಗೌಡ ಕುಟುಂಬಸ್ಥರು ಸಾಕಷ್ಟು ಅಚ್ಚರಿ ವ್ಯಕ್ತಿಪಡಿಸಿದ್ದು . ಆಕೆ ಕುಟುಂಬಕ್ಕೆ ಒಳ್ಳೆದಾಗೋದಾರೆ ಆಕೆ ಕಾಂಗ್ರೆಸ್ ಸೇರ್ಪಡೆಯಾಗಲಿ ಎಂದು ಯೋಗೇಶ್ ಗೌಡ್‌ ಸಹೋದರ ಗುರುನಾಥ್ ಬಿಟಿವಿಗೆ ಪ್ರತಿಕ್ರಿಯಿಸಿದ್ದಾರೆ.