ಇಷ್ಟಕ್ಕೂ ಪತಿ ಕಚೇರಿ ಎದುರು ಪತ್ನಿ ದಾಂಧಲೆ ಮಾಡಿಸಿದ್ಯಾಕೆ ಗೊತ್ತಾ?! ಇಲ್ಲಿದೆ ಇಂಟರಸ್ಟಿಂಗ್ ಸ್ಟೋರಿ!

 

ad

ಡಿವೋರ್ಸ್​ಗಾಗಿ ಪತಿ ಪೀಡಿಸೋದು ಸಾಮಾನ್ಯವಾದ ಸಂಗತಿ. ಆದರೇ ಇಲ್ಲೊಬ್ಬ ಪತ್ನಿ ಡಿವೋರ್ಸ್​ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಪತಿ ಆಫೀಸ್​ ಮುಂದೇ ಗಲಾಟೆ ಮಾಡಿದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಶ್ರೀರಾಂಪುರದಲ್ಲಿ ಉಮೇಶ್ ಎಂಬುವವರಿಗೆ ಸೇರಿದ ಕಚೇರಿ ಇದೆ. ಉಮೇಶ್ ಹಾಗೂ ಪತ್ನಿ ಅಮೃತಾ ನಡುವೆ ಹೊಂದಾಣಿಕೆ ಇಲ್ಲದ ಕಾರಣಕ್ಕೆ ಇಬ್ಬರು ಡಿವೋರ್ಸ್​ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಆದರೆ ಡಿವೋರ್ಸ್​ಗೆ ಮುನ್ನವೇ ಇಬ್ಬರ ನಡುವೆ ಹಲವು ಕಿರಿಕ್ ನಡೆದಿದೆ. ಈ ಮಧ್ಯೆ ಕಳೆದ ಒಂದು ವಾರದ ಹಿಂದೆ ಉಮೇಶ್ ಸ್ನೇಹಿತರು ಅಮೃತಾಗೆ ಪಬ್​ನಲ್ಲಿ ಕಿರಿಕ್ ಮಾಡಿದ್ದರು ಎನ್ನಲಾಗಿದೆ.ಈ ಬಗ್ಗೆ ಉಮೇಶ್ ವಿರುದ್ಧ ಅಮೃತಾ ದೂರು ಕೂಡ ನೀಡಿದ್ದಳು. ಆದರೇ ಇಷ್ಟಕ್ಕೆ ಸುಮ್ಮನಾಗದ ಪತ್ನಿ ಅಮೃತಾ ತನ್ನ ಸ್ನೇಹಿತರ ಜೊತೆ ಉಮೇಶ್​ ಕಚೇರಿಗೆ ಬಂದು ಅವರ ಕಚೇರಿ ಮೇಲೆ ದಾಳಿ ಮಾಡಿಸಿದ್ದಾಳೆ. ಆಫೀಸನ ಕಚೇರಿ ಮೇಲೆ ಅಮೃತಾ ಸ್ನೇಹಿತರು ಕಲ್ಲಿನ ದಾಳಿ ನಡೆಸಿದ್ದಾರೆ.

 

ಕಚೇರಿ ಬಳಿ ಪತ್ನಿಯ ಸ್ನೇಹಿತರು ದಾಂಧಲೆ ಮಾಡ್ತಿರೋದನ್ನು ನೋಡಿ ಡಿವೋರ್ಸ್​ ಕೊಡ್ತಿನಿ ಬಿಟ್ಟು ಬಿಡಮ್ಮ ಎಂದು ಉಮೇಶ್ ಗೋಗರೆದು ಮನವಿ ಮಾಡಿದರೂ ಅಮೃತಾ ಮನಸ್ಸು ಕರಗಿಲ್ಲ ಎನ್ನಲಾಗಿದೆ. ಇನ್ನು ಅಮೃತಾ ಕಡೆಯವರು ಉಮೇಶ್ ಕಚೇರಿ ಮೇಲೆ ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ಈ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇನ್ನು ಪತ್ನಿ ಪುಂಡಾಟದಿಂದ ನೊಂದ ಪತಿ ಉಮೇಶ್​, ಮೈಸೂರಿನ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದು, ನ್ಯಾಯ ದೊರಕಿಸುವಂತೆ ಮನವಿ ಮಾಡಿದ್ದಾರೆ.