ಚಾಮರಾಜಪೇಟೆಯಲ್ಲಿ ಗೆಲ್ಲದಿದ್ದರೆ ರುಂಡ ಕತ್ತರಿಸುತ್ತೇನೆ ! ರಾಜೀನಾಮೆ ನೀಡಿದ ಶಾಸಕ ಜಮೀರ್ ಸವಾಲು !!

ಈ ಬಾರಿಯ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಚುನಾವಣೆ ಗೆಲ್ಲದಿದ್ದರೆ ತನ್ನ ರುಂಡ ಕತ್ತರಿಸಿಕೊಳ್ಳುತ್ತೇನೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

ad


 ಇಂದು ಆರು ಶಾಸಕರ ಪೈಕಿ ನಾಲ್ವರು ಶಾಸಕರು ಸಭಾಧ್ಯಕ್ಷ ಕೆ ಬಿ ಕೋಳಿವಾಡರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ತಕ್ಷಣ ರಾಜೀನಾಮೆಯನ್ನು ಸ್ಪೀಕರ್ ಕೆ ಬಿ ಕೋಳಿವಾಡ ಅಂಗೀಕರಿಸಿದರು.‌ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಜಮೀರ್ ಅಹಮ್ಮದ್ ಖಾನ್, ಏಳು ಶಾಸಕರಿಗೂ ಟಿಕೆಟ್ ನೀಡುವ ಭರವಸೆಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ.

ಈಗಾಗಲೇ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಪರಮೇಶ್ವರ್, ಕೆ ಸಿ ವೇಣುಗೋಪಾಲ್ ತಮ್ಮನ್ನು ಅಭ್ಯರ್ಥಿಗಳೆಂದು ಘೋಷಿಸಿದ್ದಾರೆ ಎಂದರು. ಈ ಬಾರಿ ನಾನು ಗೆಲ್ಲೊದೇ ಕಷ್ಟ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಜೆಡಿಎಸ್ ನಾಯಕರಂತೂ ಚಾಮರಾಜಪೇಟೆಯನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ನಾನೇನಾದರೂ ಸೋತರೆ ನನ್ನ ತಲೆಯನ್ನು ಕತ್ತರಿಸಿ ಮಾಧ್ಯಮದವರ ಕೈಗೆ ಕೊಡುತ್ತೇನೆ ಎಂದರು.