ಪ್ರಜ್ವಲ್ ರೇವಣ್ಣಗೆ ಟಿಕೆಟ್ ಯಾಕೆ ಕೊಡ್ತಿಲ್ಲ ಗೊತ್ತಾ ? ಜೆಡಿಎಸ್ ಹೀರೋಗೆ ಹಿಂಗೂ ಆಗುತ್ತಾ ?

ಜೆಡಿಎಸ್ ಹೀರೋ, ಯಾವ ಸಿನೇಮಾ ನಟನಿಗೂ ಕಡಿಮೆ ಇಲ್ಲದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಲು ಯಾಕೆ ಪರದಾಡಿಸಲಾಗ್ತಿದೆ ಎಂಬ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಸಿಕ್ಕಿದೆ.‌

ಇಂದು ರಾಜೀನಾಮೆ ನೀಡಿದ ಶಾಸಕ ಜಮೀರ್ ಅಹಮ್ಮದ್ ಖಾನ್, ಪ್ರಜ್ವಲ್ ರೇವಣ್ಣಗೆ ಟಿಕೆಟ್ ಯಾಕೆ ನಿರಾಕರಿಸಲಾಗ್ತಿದೆ ಎಂಬ ಗುಟ್ಟನ್ನು ಬಹಿರಂಗಪಡಿಸಿದರು. ಜೆಡಿಎಸ್ ನಲ್ಲಿ ಏನೇನೂ ಸರಿಯಿಲ್ಲ. ಈಗಾಗಲೇ ಖೂಬ ಒಂದು ಕಾಲು ಹೊರಗಿಟ್ಟಿದ್ದಾರೆ. ಶಿವರಾಜ್ ಪಾಟೀಲ್, ಮಾನಪ್ಪ ವಜ್ಜಲ್ ಹೊರ ಹೋಗಿದ್ದಾರೆ.

 

ನಾವು ಏಳು ಜನ ಹೊರ ಬಂದ್ವಿ. ಇಷ್ಟು ಜನ ಹೊರಬರಲು ಅಲ್ಲಿನ ವಾತಾವರಣ ಕಾರಣ. ಅಲ್ಲಿ ಸ್ವಂತ ಸಾಮರ್ಥ್ಯ ಇರುವವರಿಗೆ ಅವಕಾಶ ಇಲ್ಲ ಎಂದರು. ಜೆಡಿಎಸ್ ಪಕ್ಷದಲ್ಲಿ ಸ್ವಂತ ಸಾಮರ್ಥ್ಯ ಇರುವವರಿಗೆ ಅವಕಾಶ ಇಲ್ಲ. ಪ್ರಜ್ವಲ್ ರೇವಣ್ಣಗೆ ಸ್ವಂತ ಸಾಮರ್ಥ್ಯ ಇದೆ. ಅಪ್ಪ, ಚಿಕ್ಕಪ್ಪ, ತಾತ ಎಂಬ ಅವಕಾಶಗಳನ್ನು ಬಳಸಿಕೊಳ್ಳದೆ ಬೆಳೆಯುತ್ತಿದ್ದಾನೆ. ಆದ್ದರಿಂದಲೇ ಪ್ರಜ್ವಲ್ ಗೆ ಟಿಕೆಟ್ ನೀಡ್ತಾ ಇಲ್ಲ ಎಂದಿದ್ದಾರೆ.