ನಮ್ಮ ಕ್ಷೇತ್ರದ MLA ಒಬ್ಬ ನಾಮರ್ದ- ಅಂಬಿ ವಿರುದ್ಧ ಮಂಡ್ಯ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷನ ವಿವಾದಾತ್ಮಕ ಹೇಳಿಕೆ!!

Zilla Panchayath president's Dispute Statement Against Ambareesh.
Zilla Panchayath president's Dispute Statement Against Ambareesh.

ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕಾರಣಿಗಳು ಸ್ವಕ್ಷೇತ್ರಗಳತ್ತ ಮುಖಮಾಡುತ್ತಿದ್ದಾರೆ. ಇದಕ್ಕೆ ಮಾಜಿ ಅಂಬರೀಶ್​ ಕೂಡ ಹೊರತಲ್ಲ. ಇತ್ತೀಚಿಗಷ್ಟೇ ಅಂಬರೀಶ್​​ ಮಂಡ್ಯನಗರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.

ಹೀಗಿರುವಾಗಲೇ ಇದೀಗ ಮಂಡ್ಯದಲ್ಲಿ ಅಂಬರೀಶ್​ ವಿರೋಧಿ ಅಲೆ ಜೋರಾಗಿದ್ದು, ಮಂಡ್ಯ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಅಂಬಿಯನ್ನು ನಾಮರ್ದ್​​​ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಹೌದು ಮಂಡ್ಯ ಜಿಲ್ಲಾ ಪಂಚಾಯತ್​​ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್​.ಎನ್​.ಯೋಗೇಶ್​ ಈ ರೀತಿ ವಿವಾದಾತ್ಮಕ ಹಾಗೂ ಅಸಭ್ಯ ಹೇಳಿಕೆ ನೀಡಿದ್ದಾರೆ. ಕ್ಷೇತ್ರದಲ್ಲಿ ಒಂದೇ ಒಂದು ಕೆಲಸವಾಗಿಲ್ಲ. ಸ್ಥಳೀಯ ಶಾಸಕರು ಸ್ಥಳಕ್ಕೂ ಬರುತ್ತಿಲ್ಲ. ನಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಕುಡಿಯುವ ನೀರಿನ ಘಟಕವೂ ಇಲ್ಲ. ಶಾಸಕರಿಗೆ ಸ್ಥಳೀಯರೇ ಛೀಮಾರಿ ಹಾಕುವ ಪರಿಸ್ಥಿತಿ ಇದೆ. ಅವರ ವಿರುದ್ಧ ಜಿಲ್ಲಾ ಪಂಚಾಯತ್​ನಲ್ಲೂ ಹೋರಾಟ ಮಾಡಿದ್ದೇವೆ. ಜಿಲ್ಲಾ ಮಂತ್ರಿಗಳ ಗಮನಕ್ಕೂ ತರುತ್ತೇನೆ ಎಂದು ಯೋಗೇಶ್​ ಹರಿಹಾಯ್ದಿದ್ದಾರೆ.

 

 

 

ಹೀಗೆ ಅಂಬಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಯೋಗೇಶ್​, ಸ್ಥಳೀಯ ಶಾಸಕರು ಒಂದು ರೀತಿ ನಾಮರ್ದರೆಂದರೂ ತಪ್ಪಿಲ್ಲ ಎಂದಿದ್ದು, ಈ ಹೇಳಿಕೆ ಇದೀಗ ಮಂಡ್ಯ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗ್ತಿದೆ. ಇನ್ನೊಂದೆಡೆ ಅಂಬಿ ಅಭಿಮಾನಿಗಳು ನಾಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಹಿರಿಯ ರಾಜಕಾರಣಿ ಹಾಗೂ ಹಿರಿಯ ನಟ ಅಂಬರೀಶ್​ ಬಗ್ಗೆ ಹಗುರವಾಗಿ ಮಾತನಾಡಿದ ಯೋಗೇಶ್​ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here